Publish Date: Fri, 17 May 2024 (08:58 IST)
Updated Date: Fri, 17 May 2024 (09:04 IST)
Photo Courtesy: Instagram
ಬೆಂಗಳೂರು: ಗಂಡ, ಹೆಂಡತಿ ಸಂಬಂಧ ಚೆನ್ನಾಗಿದ್ದರೆ ಆ ಸಂಸಾರ ಚೆನ್ನಾಗಿರುತ್ತದೆ. ಆದರೆ ಕೆಲವೊಂದು ಮನೆಗಳಲ್ಲಿ ವಿನಾಕಾರಣ ಗಂಡ-ಹೆಂಡತಿ ನಡುವೆ ಮನಸ್ತಾಪ, ಕೋಪ-ತಾಪಗಳು ತಾಂಡವವಾಡುತ್ತಿರುತ್ತದೆ.
ಗಂಡ, ಹೆಂಡತಿ ಸಂಬಂಧ ಚೆನ್ನಾಗಿರಲು ವಾಸ್ತು ಪ್ರಕಾರ ಕೆಲವೊಂದು ಟಿಪ್ಸ್ ಅನುಸರಿಸಿದರೆ ಉತ್ತಮ. ಎಲ್ಲವನ್ನೂ ವಾಸ್ತುವಿನಿಂದಲೇ ಸರಿಪಡಿಸಬಹುದು ಎಂದಲ್ಲ. ಆದರೆ ನಿಮ್ಮ ಇಚ್ಛಾಶಕ್ತಿ ಜೊತೆಗೆ ಇಂತಹದ್ದೊಂದು ಪ್ರಯತ್ನ ಮಾಡಿ ನೋಡಬಹುದು.
ಗಂಡ,ಹೆಂಡತಿ ಮಲಗುವ ಬೆಡ್ ರೂಂ ಗೋಡೆಯಲ್ಲಿ ಎರಡು ಜಂಟಿ ಹಂಸಗಳ ಚಿತ್ರವನ್ನು ತೂಗು ಹಾಕಿ. ಇದರಿಂದ ನಿಮ್ಮ ಪ್ರೇಮ ಜೀವನ ಚೆನ್ನಾಗಿರಬೇಕೆಂದರೆ ಜೋಡಿ ಹಂಸದ ಚಿತ್ರ ಪ್ರೇರಣೆ ನೀಡುತ್ತದೆ. ಅದೇ ರೀತಿ ಎರಡು ಪ್ರೇಮಿ ಪಾರಿವಾಳದ ಜೋಡಿಯ ಚಿತ್ರ ಹಾಕಿಕೊಂಡರೂ ಉತ್ತಮ.
ಪಾರಿವಾಳಗಳು ಪ್ರೀತಿ, ಶಾಂತಿಯ ಸಂಕೇತ. ಇವುಗಳ ಚಿತ್ರಗಳನ್ನು ಬೆಡ್ ರೂಂನಲ್ಲಿ ಹಾಕುವುದರಿಂದ ಕಲಹ, ಮನಸ್ತಾಪಗಳು ದೂರವಾಗುತ್ತದೆ. ಅಲ್ಲದೆ ಇದು ಅದೃಷ್ಟವನ್ನೂ ತರುತ್ತವೆ. ನಿಮ್ಮ ಸಂಬಂಧ ಸುಧಾರಣೆ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ಪಾರಿವಾಳಗಳ ಚಿತ್ರಗಳು ಸಹಾಯ ಮಾಡುತ್ತವೆ. ಮಾಡಿ ನೋಡಿ.