Webdunia - Bharat's app for daily news and videos

Install App

ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಳ್ಳಬಾರದು ಯಾಕೆ

Krishnaveni K
ಬುಧವಾರ, 14 ಫೆಬ್ರವರಿ 2024 (08:30 IST)
WD
ಬೆಂಗಳೂರು: ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಂಡರೆ ಮನೆಗೆ ಒಳ್ಳೆಯದಲ್ಲ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಹಾಗಿದ್ದರೆ ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಂಡರೆ ಏನಾಗುತ್ತದೆ ನೋಡೋಣ.

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇದ್ದೇ ಇರುತ್ತದೆ. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿದ್ದು, ಕೈ ಜಾರಿ ನೆಲಕ್ಕೆ ಬಿದ್ದರೆ ಚೂರು ಚೂರಾಗುವುದು ಗ್ಯಾರಂಟಿ. ಆದರೆ ಕನ್ನಡಿ ಹೆಣ್ಣಿಗೆ ಅತ್ಯಂತ ಪ್ರಿಯವಾದ ವಸ್ತು. ಇದು ದೇವರ ಪೂಜೆಯಲ್ಲೂ ಬಳಕೆಯಾಗುವ ಸಾಧನ. ಸುಮಂಗಲಿಯ ಲಕ್ಷಣ ಎನ್ನಲಾಗುತ್ತದೆ. ಹೀಗಾಗಿಯೇ ಶುಕ್ರವಾರ ಮತ್ತು ಮಂಗಳವಾರದಂತಹ ದೇವಿಯ ವಾರಗಳಲ್ಲಿ ಕನ್ನಡಿ ಬಿದ್ದು ಒಡೆದು ಹೋದರೆ ಅಶುಭ ಎಂದು ನಂಬುವವರೂ ಇದ್ದಾರೆ.

ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಪ್ರಕಾರವೂ ಪ್ರಶಸ್ತವಲ್ಲ. ಕನ್ನಡಿ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಒಂದು ವೇಳೆ ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಂಡರೆ ಋಣಾತ್ಮಕ ಶಕ್ತಿಗೆ ಜಾಗ ಮಾಡಿಕೊಟ್ಟಂತೆ. ಕನ್ನಡಿ ಲಕ್ಷ್ಮೀದೇವಿಯ ಸಂಕೇತವಾಗಿದ್ದು, ಒಡೆದ ಕನ್ನಡಿಯಲ್ಲಿ ಮುಖ ನೋಡಿದರೆ ಮನೆಯಲ್ಲಿ ಧನಹಾನಿ, ಅನಾಹುತಗಳು ಸಂಭವಿಸುವ ಸಾಧ‍್ಯತೆಯಿದೆ.

ಹೀಗಾಗಿ ಅಕಸ್ಮಾತ್ತಾಗಿ ಕನ್ನಡಿ ಬಿದ್ದು ಒಡೆದು ಹೋದರೆ ತಕ್ಷಣವೇ ಅದನ್ನು ಎತ್ತಿ ಹೊರಗೆ ಬಿಸಾಕಬೇಕು. ಕನ್ನಡಿಯನ್ನು ಒಡೆದರೂ ಇಟ್ಟುಕೊಂಡರೆ ಅದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ. ಮನಸ್ಸಿನ ನೆಮ್ಮದಿಯೂ ಕನ್ನಡಿ ಚೂರಿನಂತೇ ಚೂರಾಗುತ್ತದೆ ಎಂಬುದು ನಂಬಿಕೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಚಾಮುಂಡೇಶ್ವರಿ ಅಷ್ಟೋತ್ತರ ಈ ಸಮಸ್ಯೆಯಿದ್ದಲ್ಲಿ ತಪ್ಪದೇ ಓದಿ

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments