Select Your Language

Notifications

webdunia
webdunia
webdunia
webdunia

ಲಕ್ಷ್ಮೀ ದೇವಿಗೆ ಹಾಲಿನ ನೈವೇದ್ಯ ಮಾಡಬೇಕು ಯಾಕೆ

Lakshmi Godess
ಶುಕ್ರವಾರವೆಂದರೆ ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಹಾಲಿನ ನೈವೇದ್ಯ ಮಾಡಲಾಗುತ್ತದೆ. ಲಕ್ಷ್ಮೀ ದೇವಿಗೆ ಹಾಲಿನ ನೈವೇದ್ಯ ವಿಶೇಷ ಯಾಕೆ?

ಹಾಲು ಸಾತ್ವಿಕ ಆಹಾರ ವಸ್ತು. ಇದು ಪರಿಶುದ್ಧತೆಯ ಸಂಕೇತ. ದೇವಿಗೆ ನೈವೇದ್ಯ ನೀಡುವಾಗ ಪರಿಶುದ್ಧ ಮನಸ್ಸಿನಿಂದ ಹಾಲಿನಷ್ಟೇ ಶುದ್ಧ ಮನಸ್ಸಿನಿಂದ ನೀಡಬೇಕು. ಲಕ್ಷ್ಮೀ ದೇವಿಗೆ ಹಾಲು ವಿಶೇಷವಾಗಿರುವುದಕ್ಕೆ ಕಾರಣವೂ ಇದೆ.

ಪೌರಾಣಿಕ ಹಿನ್ನಲೆ ಪ್ರಕಾರ ಸಮುದ್ರ ಮಥನ ಸಂದರ್ಭದಲ್ಲಿ ಲಕ್ಷ್ಮೀ ದೇವಿಯು ಕ್ಷೀರ ಸಾಗರದಿಂದ ಉದ್ಭವವಾಗುತ್ತಾಳೆ. ಸಂಸ್ಕೃತದಲ್ಲಿ ಕ್ಷೀರ ಎಂದರೆ ಹಾಲು ಎಂದರ್ಥ. ಹಾಲಿನ ಕಡಲು ಲಕ್ಷ್ಮೀ ದೇವಿಯ ಉಗಮ ಸ್ಥಾನ ಎನ್ನಲಾಗುತ್ತದೆ. ಹೀಗಾಗಿ ಹಾಲಿನ ನೈವೇದ್ಯವಿಡುವುದು ವಿಶೇಷವಾಗಿದೆ.

ಹಾಲಿನ ಅರ್ಪಣೆ ಲಕ್ಷ್ಮೀ ದೇವಿಯನ್ನು ಶಾಂತವಾಗಿಡುತ್ತದಂತೆ. ಹಾಲನ್ನು ನೈವೇದ್ಯ ಮಾಡುವುದರಿಂದ ಮನೆಯಲ್ಲೂ ಶಾಂತಿ, ನೆಮ್ಮದಿ ನೆಲೆಸುವುದು ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಲಕ್ಷ್ಮೀ ದೇವಿಗೆ ಹಾಲಿನ ನೈವೇದ್ಯ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರ ಗ್ರಹ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು