ಬೆಂಗಳೂರು: ದೇವಾಲಯಗಳಿಗೆ ಹೋದಾಗ ದೇವರ ಮೂರ್ತಿಯ ಒಂದು ಭಾಗದಲ್ಲಿ ನಿಂತು ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇವೆ. ಆದರೆ ಯಾವ ಭಾಗದಲ್ಲಿ ನಮಸ್ಕರಿಸಿದರೆ ಉತ್ತಮ ಎಂದು ಶಾಸ್ತ್ರ ಹೇಳುತ್ತದೆ ನೋಡೋಣ.
ದೇವಾಲಯಗಳಿಗೆ ಹೋದಾಗ ದೇವರ ವಿಗ್ರಹದ ಬಲ ಭಾಗದಲ್ಲಿ ನಿಂತು ನಮಸ್ಕರಿಸುವುದು ಸೂಕ್ತ. ಏಕೆಂದರೆ ದೇವರ ಎಡ ಕೈಯಲ್ಲಿ ಗದಾ, ತ್ರಿಶೂಲ ಮುಂತಾದ ಆಯುಧಗಳಿರುತ್ತವೆ. ಹೀಗಾಗಿ ಎಡಭಾಗದಲ್ಲಿ ನಿಂತು ನಮಸ್ಕರಿಸಿದರೆ ದೇವರ ಆಯುಧಗಳಿಂದ ನಮ್ಮ ಶರೀರ ನಾಶವಾಗುವ ಸಾಧ್ಯತೆಯಿದೆ.
ಯಾವಾಗ ನಮಸ್ಕರಿಸುವುದಿದ್ದರೂ ಬಲಭಾಗದಲ್ಲೇ ನಮಸ್ಕರಿಸಬೇಕು. ಬಲಭಾಗದ ಕೈ ಸದಾ ಅಭಯ, ಜ್ಞಾನವನ್ನು ನೀಡುತ್ತದೆ. ಹೀಗಾಗಿ ಭಗವಂತನ ಅನುಗ್ರಹ ಸಿಗಬೇಕಾದರೆ ಬಲಭಾಗದಲ್ಲೇ ನಮಸ್ಕರಿಸುವುದು ಸೂಕ್ತ.