Webdunia - Bharat's app for daily news and videos

Install App

ಯಾವ ದೇವರಿಗೆ ಯಾವ ಹೂವಿನಿಂದ ಪೂಜಿಸಬೇಕು

Krishnaveni K
ಬುಧವಾರ, 24 ಜುಲೈ 2024 (08:35 IST)
ಬೆಂಗಳೂರು: ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ. ಆ ಪೈಕಿ ಪ್ರಮುಖರಾದ ದೇವರಿಗೆ ಯಾವ ಹೂವುಗಳಿಂದ ಪೂಜಿಸಿದರೆ ಅವನು ಪ್ರಸನನ್ನಾಗುತ್ತಾನೆ ಎಂದು ಇಲ್ಲಿ ನೋಡಿ.

ಮಹಾವಿಷ್ಣು: ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾವಿಷ್ಣುವಿಗೆ ತುಳಸಿ, ಕಿಸ್ಕಾರ ಹೂಗಳಿಂದ ಪೂಜೆ ಮಾಡಿದರೆ ಅತ್ಯಂತ ಶ್ರೇಯಸ್ಕರವಾದುದು. ತುಳಸಿ ಲಕ್ಷ್ಮೀ ದೇವಿಯನ್ನು ಪ್ರತಿನಿಧಿಸುತ್ತದೆ.
ಶ್ರೀಕೃಷ್ಣ: ಮಹಾವಿಷ್ಣುವಿನ ಅಂಶವಾದ ಕೃಷ್ಣನನ್ನು ಪೂಜೆ ಮಾಡುವಾಗ ತುಳಸಿ, ಪಾರಿಜಾತ ಪುಷ್ಪ ತಪ್ಪದೇ ಇರಲೇಬೇಕು.
ಗಣಪತಿ: ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠವಾದುದು. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ
ಆಂಜನೇಯ: ವಾನರ ರೂಪಿ, ಆಂಜನೇಯನಿಗೆ ಮಲ್ಲಿಗೆ ಹೂವೆಂದರೆ ಬಲು ಇಷ್ಟ. ಆಂಜನೇಯನಿಗೆ ಮಲ್ಲಿಗೆ ಹೂವಿನಿಂದ ಪೂಜೆ ಮಾಡಿದರೆ ಆತ ಪ್ರಸನನ್ನಾಗುತ್ತಾನೆ.
ಕೆಂಪು ದಾಸವಾಳ: ದುರ್ಗೆ, ಕಾಳಿ, ಚಾಮುಂಡಿ ಸೇರಿದಂತೆ ಅಮ್ಮನವರ ಪೂಜೆಯಲ್ಲಿ ಕೆಂಪು ಬಣ್ಣದ ದಾಸವಾಳವಿದ್ದರೆ ಅದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಕಮಲ: ಲಕ್ಷ್ಮೀ ದೇವಿ ಎಂದರೆ ಪಕ್ಕನೇ ನೆನಪಾಗುವುದು ಕಮಲದ ಹೂವುಗಳು. ಲಕ್ಷ್ಮೀ ದೇವಿಯನ್ನು ಕಮಲದ ಹೂವುಗಳಿಂದ ಪೂಜಿಸಿದರೆ ವಿಶೇಷವಾಗಿರುತ್ತದೆ.
ಸರಸ್ವತಿ: ಸರಸ್ವತಿ ದೇವಿಯನ್ನು ಪೂಜೆ ಮಾಡುವಾಗ ಪಾಲಾಶ ಹೂವನ್ನು ಇಡುವುದು ವಾಡಿಕೆ. ಈ ಹೂವುಗಳನ್ನು ಜ್ಞಾನದ ಸಂಕೇತ ಎನ್ನಲಾಗುತ್ತದೆ.
ಶಿವ: ಭಗವಾನ್ ಶಿವನಿಗೆ ಬಿಲ್ವಪತ್ರೆಯೇ ಮೆಚ್ಚಿನ ಹೂವು. ಶಿವನನ್ನು ಆರಾಧಿಸುವಾಗ ಬಿಲ್ವ ಪತ್ರೆಯಿಂದ ಅರ್ಚಿಸಿದರೆ ನಮ್ಮ ಅನೇಕ ದೋಷ ನಿವಾರಣೆಯಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments