Select Your Language

Notifications

webdunia
webdunia
webdunia
webdunia

ಶಿವ ಅಪರಾಧ ಕ್ಷಮಾಪಣಾ ಸ್ತೋತ್ರ ಯಾವುದು, ಇದನ್ನು ಓದಿದರೆ ಏನು ಫಲ ತಿಳಿಯಿರಿ

Shiva

Krishnaveni K

ಬೆಂಗಳೂರು , ಸೋಮವಾರ, 22 ಜುಲೈ 2024 (08:42 IST)
ಬೆಂಗಳೂರು: ಇಂದು ಸೋಮವಾರವಾಗಿದ್ದು ಭಗವಾನ್ ಶಿವನಿಗೆ ಸಂಬಂಧಿಸಿದ ದಿನವಾಗಿದೆ. ಈ ದಿನ ಶಿವನಿಗೆ ಪೂಜೆ, ಅವನ ನಾಮ ಸ್ಮರಣೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಅದರಲ್ಲೂ ವಿಶೇಷವಾಗಿ ಇಂದು ಶಿವ ಅಪರಾಧ ಕ್ಷಮಾಪಣಾ ಸ್ತೋತ್ರ ಓದಿ.

ಶಿವ ಅಪರಾಧ ಕ್ಷಮಾಪಣಾ ಸ್ತೋತ್ರ ಬರೆದಿರುವುದು ಶ್ರೀ ಆದಿಶಂಕರಾಚಾರ್ಯ. ಇದನ್ನು ಸೋಮವಾರಗಳಂದು ಓದಿದರೆ ಅತ್ಯಂತ ಶ್ರೇಯಸ್ಕರವಾಗಿದೆ. ನಾವು ಮಾಡುವ ಕರ್ಮಫಲಗಳನ್ನು ಕಳೆಯಲು ಮತ್ತು ಅರಿತೋ ಅರಿಯದೆಯೋ ಮಾಡುವ ತಪ್ಪುಗಳನ್ನು ಮನ್ನಿಸಿ ಆಶೀರ್ವದಿಸು ಎಂದು ಶಿವನಲ್ಲಿ ಪ್ರಾರ್ಥನೆ ಮಾಡುವ ಶ್ಲೋಕ ಇದಾಗಿದೆ.

ಆದೌ ಕರ್ಮಪ್ರಸಂಗಯಾತ್ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ
ವಿಣ್ಮೂತ್ರಾಮೇಧ್ಯಮಧ್ಯೆ ಕಥಯತಿ ನಿತರಾಂ ಜಾಠರೋ ಜಾತವೇದಾಃ
ಯದ್ಯದ್ವೈ ತತ್ರ ದುಃಖಂ, ವ್ಯಥಯತಿ ನಿತರಾಂ ಶಕ್ಯತೆ ಕೇನ ವಕ್ತುಂ
ಕ್ಷಂತವ್ಯೋ ಮೇಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ


ಇದು ಶಿವ ಅಪರಾಧ ಸ್ತೋತ್ರದ ಮೊದಲ ಶ್ಲೋಕವಾಗಿದೆ. ಇದೇ ರೀತಿ ನಾಲ್ಕು ಸಾಲುಗಳ ಒಟ್ಟು 16 ಪ್ಯಾರಾಗಳಿವೆ. ಇವಿಷ್ಟನ್ನು ತಪ್ಪಿಲ್ಲದೇ ಓದುವುದರಿಂದ ಅದರ ಫಲ ನಮಗೆ ಸಿಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಯಾವುದೇ ವಯಸ್ಸಿನವರೂ ಈ ಶ್ಲೋಕಗಳನ್ನು ಓದಬಹುದು. ಇದರಿಂದ ನಾವು ಮಾಡುವ ತಪ್ಪುಗಳನ್ನು ಮನ್ನಿಸಿ ಶಿವನು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಾನೆ ಎಂಬುದು ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?