Select Your Language

Notifications

webdunia
webdunia
webdunia
webdunia

ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಶ್ರೀಮಂತರಾಗಲು ಏನು ಮಾಡಬೇಕು

Astrology

Krishnaveni K

ಬೆಂಗಳೂರು , ಮಂಗಳವಾರ, 16 ಜುಲೈ 2024 (08:38 IST)
ಬೆಂಗಳೂರು: ಕೆಲವರು ಹುಟ್ಟಿನಿಂದಲೇ ಶ್ರೀಮಂತರಾದರೆ ಮತ್ತೆ ಕೆಲವರು ತಮ್ಮ ಶ್ರಮದ ಫಲವಾಗಿ ಐಶ್ವರ್ಯ ಗಳಿಸುತ್ತಾರೆ. ಮತ್ತೆ ಕೆಲವರಿಗೆ ಅದೃಷ್ಟದಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ ಯಾವ ಸಂಖ್ಯೆಯಲ್ಲಿ ಜನಿಸಿದವರು ಏನು ಮಾಡಿದರೆ ಶ್ರೀಮಂತರಾಗುತ್ತಾರೆ ನೋಡೋಣ.

ಧನವಂತರಾಗಲು ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಬೇಕು. ಅದಕ್ಕೆ ಅದೃಷ್ಟ ಮತ್ತು ಪರಿಶ್ರಮವೂ ಬೇಕು. ನಮ್ಮ ಜೀವನದಲ್ಲಿ ಐಶ್ವರ್ಯ ಸಂಪಾದನೆಯಾಗಬೇಕು ಎಂದರೆ ಸಂಖ್ಯೆಯ ಬಲವೂ ಬೇಕು. 1,10,19 ಮತ್ತು 28 ನೇ ದಿನಾಂಕದಂದು ಜನಿಸಿದರೆ ಪ್ರತಿನಿತ್ಯ ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಶ್ರೀಮಂತಿಕೆ ಬರುತ್ತದೆ.

2,11, 20 ಅಥವಾ 29 ನೇ ದಿನಾಂಕದಂದು ಜನಿಸಿದವರಿಗೆ ಶ್ರೀಮಂತಿಕೆ ಬರಬೇಕಾದರೆ ಪ್ರತಿನಿತ್ಯ ಬೆಳ್ಳಿ ಲೋಟದಲ್ಲಿ ನೀರು ಸೇವನೆ ಮಾಡಬೇಕು. ಜೊತೆಗೆ ಈ ತಾರೀಕಿನಿಂದ ಜನಿಸಿದವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕಲಿಯಬೇಕು. ಇನ್ನು, 3,12, 21 ಅಥವಾ 30 ನೇ ದಿನಾಂಕದಂದು ಜನಿಸಿದವರು ಸ್ನಾನ ಮಾಡುವಾಗ ಒಂದು ಚಿಟಿಕೆ ಅರಶಿನವನ್ನು ಸೇರಿಸಿ ಸ್ನಾನ ಮಾಡಿ. ಇದರಿಂದ ಒಳಿತಾಗುತ್ತದೆ. ಈ ರಾಶಿಯವರು ತಮ್ಮ ಗುರುಗಳನ್ನು ಗೌರವಿಸುವುದಕ್ಕೆ ಪ್ರಾಶಸ್ತ್ಯ ನೀಡಬೇಕು.

4,13,22 ಅಥವಾ 31 ನೇ ದಿನಾಂಕದಂದು ಜನಿಸಿದವರು ದುರ್ಗಾ ದೇವಿಯ ಆರಾಧನೆ ಮಾಡಬೇಕು.5,14 ಅಥವಾ 23 ನೆಯ ದಿನಾಂಕದಂದು ಜನಿಸಿದವರು ತಮ್ಮ ಪರ್ಸ್ ನಲ್ಲಿ ಯಾವತ್ತೂ ಒಂದು ಚೂರು ಏಲಕ್ಕಿಯನ್ನು ಇಟ್ಟುಕೊಂಡರೆ ಐಶ್ವರ್ಯ ವೃದ್ಧಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?