Select Your Language

Notifications

webdunia
webdunia
webdunia
webdunia

ಆಷಾಢ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ

Aarathi

Krishnaveni K

ಬೆಂಗಳೂರು , ಸೋಮವಾರ, 15 ಜುಲೈ 2024 (08:41 IST)
ಬೆಂಗಳೂರು: ಆಷಾಢ ಮಾಸ ಈಗಾಗಲೇ ಶುರುವಾಗಿದ್ದು ಆಗಸ್ಟ್ ಮೊದಲ ವಾರದವರೆಗೆ ಮುಂದುವರಿಯಲಿದೆ. ಆಷಾಢ ಮಾಸದಲ್ಲಿ ಶಾಸ್ತ್ರಗಳ ಪ್ರಕಾರ ಕೆಲವೊಂದು ಕೆಲಸಗಳಿಗೆ ನಿಷಿದ್ಧವಾಗಿದೆ. ಅವುಗಳು ಯಾವುವು ನೋಡೋಣ.

ಆಷಾಢ ಮಾಸದಲ್ಲಿ ಗಂಡು-ಹೆಣ್ಣು ಸಮಾಗಮವಾಗಬಾರದು ಎನ್ನುತ್ತಾರೆ. ಹೀಗಾಗಿಯೇ ಕೆಲವರು ಹೊಸದಾಗಿ ಮದುವೆಯಾದ ದಂಪತಿಯನ್ನು ಈ ಸಂದರ್ಭದಲ್ಲಿ ಪ್ರತ್ಯೇಕವಾಗಿರಿಸುತ್ತಾರೆ.
ಆಷಾಢ ಮಾಸದಲ್ಲಿ ತಾಮಸ ಆಹಾರಗಳಾದ ಈರುಳ್ಳಿ, ಬದನೆಕಾಯಿ, ಬೆಳ್ಳುಳ್ಳಿ, ಹೂಕೋಸು, ಉದ್ದಿನಬೇಳೆ ಮುಂತಾದ ಅಹಾರ ವಸ್ತುಗಳನ್ನು ಸೇವಿಸಬಾರದು.  ಅಲ್ಲದೆ, ಮೀನು, ಮಾಂಸ, ಮದ್ಯಪಾನದಂತಹ ಅಭ್ಯಾಸಗಳಿಂದಲೂ ದೂರವಿರಬೇಕು.

ಆಷಾಢ ಮಾಸದಲ್ಲಿ ಸೊಪ್ಪು ತರಕಾರಿಗಳು, ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು.
ಆಷಾಢ ಮಾಸದಲ್ಲಿ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ನಡೆಸಲು ಯೋಗ್ಯ ಸಮಯವಲ್ಲ
ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಇನ್ನೊಬ್ಬರನ್ನು ನಿಂದಿಸುವುದು, ಜಗಳಕ್ಕಿಳಿಯುವುದು ಖಂಡಿತಾ ಮಾಡಬೇಡಿ.
ಅದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಬರಿಗೈಯಲ್ಲಿ ಕಳುಹಿಸದಿರಿ.

ಆಷಾಢ ಮಾಸದಲ್ಲಿ ಏನು ಮಾಡಬೇಕು?
ಆಷಾಢ ಮಾಸದಲ್ಲಿ ಮಹಾವಿಷ್ಣು, ದುರ್ಗಾದೇವಿಯ ಆರಾಧನೆ, ಪಿತೃಗಳ ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಆಷಾಢ ಮಾಸ ತೀರ್ಥಯಾತ್ರೆಗೆ ಹೇಳಿ ಮಾಡಿಸಿದ ಸಮಯ. ಅದೇ ರೀತಿ ನಿಮ್ಮ ಬಳಿ ಬೇಡಿಕೊಂಡು ಬಂದವರಿಗೆ ದಾನ ಮಾಡಿದರೆ ಅತ್ಯಂತ ಫಲಪ್ರದವಾಗಿರುತ್ತದೆ.
ಆಷಾಢ ಮಾಸದಲ್ಲಿ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಪೂಜೆ ಮಾಡಿದರೆ ಶ್ರೇಷ್ಠ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?