ಬೆಂಗಳೂರು: ಶುಕ್ರವಾರ ಲಕ್ಷ್ಮೀ ದೇವಿಯ ವಾರವೆಂದೇ ಪರಿಗಣಿತವಾಗಿದೆ. ಈ ದಿನ ಶುಭ ಕೆಲಸಗಳಿಗೆ ಯೋಗ್ಯವಾದ ದಿನ. ಆದರೆ ಕೆಲವೊಂದು ವಸ್ತುಗಳನ್ನು ಈ ದಿನ ಖರೀದಿಸಿ ಮನೆಗೆ ತಂದರೆ ದಾರಿದ್ರ್ಯ ಬರಬಹುದು ಎಂಬ ನಂಬಿಕೆಯಿದೆ. ಅಂತಹ ವಸ್ತುಗಳು ಯಾವುವು ನೋಡಿ.
ಪೂಜೆ ಸಾಮಗ್ರಿಗಳು
ಪೂಜೆ ಸಾಮಗ್ರಿಗಳು ಮಂಗಲಕರ ವಸ್ತುವಾದರೂ ಶುಕ್ರವಾರದಂದು ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿ ತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬೇಡಿ. ಇದರಿಂದ ದಾರಿದ್ರ್ಯ ಬರಬಹುದು.
ಅಡುಗೆ ಪಾತ್ರೆಗಳು
ಶುಕ್ರವಾರದಂದು ಅಡುಗೆ ಮನೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮನೆಗೆ ತಂದರೆ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಧಾನ್ಯ ನಷ್ಟವಾಗುವ ಭೀತಿಯಿರುತ್ತದೆ. ಹೀಗಾಗಿ ಈ ದಿನ ಅಡುಗೆ ಮನೆಯ ವಸ್ತುಗಳನ್ನು ಖರೀದಿ ಮಾಡಬೇಡಿ.
ಅದೇ ರೀತಿ ಈ ದಿನ ಹುಳಿ ಪದಾರ್ಥಗಳು, ಇಲೆಕ್ಟ್ರಾನಿಕ್ ವಸ್ತುಗಳು, ಆಸ್ತಿ, ವಾಹನ ಖರೀದಿಗೂ ಸೂಕ್ತ ದಿನವಲ್ಲ. ಅಷ್ಟೇ ಏಕೆ ಶುಕ್ರವಾರದಂದು ಯಾರಾದರೂ ವಸ್ತು ಅಥವಾ ಹಣವನ್ನು ಸಾಲವಾಗಿ ಕೇಳಿದರೂ ಕೊಡಲು ಹೋಗಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಉಂಟಾಗುವ ಅಪಾಯವಿದೆ.