ಬೆಂಗಳೂರು: ಶಿವನ ಕಣ್ಣು ಎಂದೇ ಪ್ರತೀತಿಯಲ್ಲಿರುವ ರುದ್ರಾಕ್ಷಿ ಮಣಿಯ ಸರವನ್ನು ಯಾರು ಧರಿಸಬೇಕು ಎಂಬ ಬಗ್ಗೆ ಅನೇಕರಲ್ಲಿ ಗೊಂದಲಗಳಿವೆ. ಅದರಲ್ಲೂ ವಿದ್ಯಾರ್ಥಿಗಳು ರುದ್ರಾಕ್ಷಿ ಸರ ಧರಿಸಬಹುದೇ ಮತ್ತು ಧರಿಸಿದರೆ ಏನು ಫಲ ನೋಡೋಣ.
ರುದ್ರಾಕ್ಷಿಯು ಒಬ್ಬ ವ್ಯಕ್ತಿಯಲ್ಲಿ ದೈಹಿಕ ಮತ್ತು ಮಾನಸಿಕ ಬಲ ತುಂಬಲು ನೆರವಾಗುತ್ತದೆ. ಮನೋವಿಕಾರಗಳ ನಿಯಂತ್ರಣಕ್ಕೆ, ದೇಹದ ಆರೋಗ್ಯದ ದೃಷ್ಟಿಯಿಂದ ರುದ್ರಾಕ್ಷಿ ಸರ ಧರಿಸುವುದು ಶ್ರೇಯಸ್ಕರವಾಗಿದೆ. ಅದರಲ್ಲೂ ವಿದ್ಯಾರ್ಥಿಗಳೂ ರುದ್ರಾಕ್ಷಿ ಸರ ಧರಿಸಿದರೆ ಅದರಿಂದ ಉತ್ತಮ ಫಲ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳಲ್ಲಿ ಓದಿನ ಒತ್ತಡ ಹೆಚ್ಚಿದಾಗ ಮಾನಸಿಕವಾಗಿ ಅಶಾಂತಿ, ಒತ್ತಡ ಉಂಟಾಗುತ್ತದೆ. ಯಾವದರ ಮೇಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ರುದ್ರಾಕ್ಷಿ ಸರ ದರಿಸುವುದರಿಂದ ಒತ್ತಡ, ಗೊಂದಲಗಳು ದೂರವಾಗಿ ಶೈಕ್ಷಣಿಕವಾಗಿ ಉತ್ತಮ ಫಲಗಳನ್ನು ಪಡೆಯಬಹುದು.
ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಚತುರ್ಮುಖಿ ಅಥವಾ 6 ಮುಖವಿರುವ ರುದ್ರಾಕ್ಷಿ ಧರಿಸಿದರೆ ಉತ್ತಮ. ನಾಲ್ಕು ಮುಖದ ರುದ್ರಾಕ್ಷಿ ಬ್ರಹ್ಮ ದೇವನನ್ನು ಪ್ರತಿನಿಧಿಸುತ್ತದೆ. ಬ್ರಹ್ಮ ದೇವನು ಅಪಾರ ಬುದ್ಧಿವಂತ. ಹೀಗಾಗಿ ಈ ರುದ್ರಾಕ್ಷವನ್ನು ಧರಿಸಬಹುದು. ಅಲ್ಲದೆ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಆಲೋಚನೆಗಳನ್ನು ಹೆಚ್ಚಿಸುವ ಶಕ್ತಿ ಹೊಂದಿದೆ.