ಕಸ ಬುಟ್ಟಿಯನ್ನು ಮನೆಯ ಯಾವ ದಿಕ್ಕಿಗೆ ಇಟ್ಟರೆ ಸೂಕ್ತ ತಿಳಿಯಿರಿ

Krishnaveni K
ಸೋಮವಾರ, 26 ಫೆಬ್ರವರಿ 2024 (09:23 IST)
Photo Courtesy: facebook
ಬೆಂಗಳೂರು: ಮನೆಯಲ್ಲಿ ಪ್ರತಿಯೊಂದು ವಸ್ತುವನ್ನೂ ಆಯಾ ಜಾಗದಲ್ಲಿ ಇಟ್ಟರೇ ಸೂಕ್ತ. ವಾಸ್ತು ಪ್ರಕಾರ ನಾವು ನಿತ್ಯ ಬಳಸುವ ಕಸದ ಬುಟ್ಟಿಗೂ ಎಲ್ಲಿ ಇಡಬೇಕೆಂದು ನಿಯಮವಿದೆ.

ಕಸದ ಬುಟ್ಟಿ ಎಂದರೆ ಅದು ಬೇಡದ ವಸ್ತು ಬಿಸಾಕುವ ಸ್ಥಳ ಅಥವಾ ಪಾತ್ರೆ ಎಂಬ ಉಡಾಫೆ ನಮಗಿರುತ್ತದೆ. ಅದು ಎಲ್ಲಿಟ್ಟರೂ, ಹೇಗಿಟ್ಟರೂ ನಡೆಯುತ್ತದೆ ಎಂಬ ಜಾಯಮಾನ ನಮ್ಮದು. ಆದರೆ ವಾಸ್ತು ಪ್ರಕಾರ ಹಾಗಲ್ಲ. ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಯನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಅದಕ್ಕೂ ನಿಯಮವಿದೆ. ಯಾವ ದಿಕ್ಕಿಗೆ ಇಟ್ಟರೆ ಸೂಕ್ತ ಎಂಬ ಶಾಸ್ತ್ರವಿದೆ.

ಯಾವುದೇ ವಸ್ತುವನ್ನೂ ಎಲ್ಲಿ ಇಡಬೇಕೋ ಅಲ್ಲಿಟ್ಟರೆ ಮಾತ್ರ ಆ ಮನೆಗೆ ಸಮೃದ್ಧಿ. ಇಲ್ಲದೇ ಹೋದರೆ ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.  ಕಸದ ಬುಟ್ಟಿ ಮತ್ತು ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೂ ಸಂಬಂಧವಿದೆ. ತಪ್ಪು ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ನಮಗೆ ಆರ್ಥಿಕ ಸಂಕಷ್ಟಗಳು ಎದುರಾಗಬಹುದು.

ಹೀಗಾಗಿ ಮನೆಯ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಈ ಎರಡು ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ನೀವು ಒಳ್ಳೆಯ ಫಲಗಳನ್ನು ಕಾಣಬಹುದು. ಇಲ್ಲದೇ ಹೋದರೆ ಹಣಕಾಸಿನ ಸಂಕಷ್ಟ, ಉದ್ಯೋಗ ನಷ್ಟ ಭೀತಿ, ಸಾಲದ ಭಯ ಇತ್ಯಾದಿ ಎದುರಾಗಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸರಸ್ವತಿ ಕವಚ ಸ್ತೋತ್ರ ಕನ್ನಡದಲ್ಲಿ ಮತ್ತು ಓದುವುದರ ಫಲವೇನು

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಮುಂದಿನ ಸುದ್ದಿ
Show comments