Select Your Language

Notifications

webdunia
webdunia
webdunia
webdunia

ಮಹಾವಿಷ್ಣುವಿನ ಶಾಪಕ್ಕೆ ಗುರಿಯಾದರೆ ಏನೆಲ್ಲಾ ಪರಿಣಾಮವಾಗುತ್ತದೆ

Mahavishnu
ಮಹಾವಿಷ್ಣು ಅತ್ಯಂತ ಶಾಂತ ಸ್ವಭಾವದ ದೇವರು ಎಂದು ನಂಬಲಾಗಿದೆ. ಹಾಗಿದ್ದರೂ ಧರ್ಮವನ್ನು ಮೀರಿದಾಗ ಮಹಾವಿಷ್ಣುವಿನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಜಾತಕದಲ್ಲಿ ಮಹಾವಿಷ್ಣುವಿನ ಶಾಪ, ಅನಾನುಕೂಲವಿದ್ದರೆ ಏನು ಪರಿಣಾಮ ಎದುರಿಸಬೇಕಾಗುತ್ತದೆ ತಿಳಿದುಕೊಳ್ಳಿ.

ಕೆಲಸಕ್ಕೆ ತಕ್ಕ ಫಲ ಸಿಗದು: ನಾವು ಏನೋ ಕೆಲಸವನ್ನು ಕಷ್ಟಪಟ್ಟು ಮಾಡಿರುತ್ತೇವೆ. ಆದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎನಿಸಬಹುದು. ಉದ್ಯೋಗದಲ್ಲಿ ಸ್ಥಿರತೆಯಿಲ್ಲ ಎನಿಸಬಹುದು.

ಬುದ್ಧಿಮತ್ತೆಯ ಮೇಲೆ ಪರಿಣಾಮ: ಮಹಾವಿಷ್ಣು ನಮ್ಮ ಬುದ್ಧಿಗೆ ಅಧಿದೇವರೂ ಹೌದು. ಹೀಗಾಗಿ ನಾವು ಬುದ್ಧಿವಂತಿಕೆಯ ಕೊರತೆ, ವಿವೇಚನೆಯಿಲ್ಲದೇ ನಿರ್ಧಾರ ತೆಗೆದುಕೊಳ್ಳುತ್ತೀರಿ.

ವಿಷ್ಣುವಿರದ ಕಡೆಯೂ ಲಕ್ಷ್ಮೀ ಇರಲ್ಲ: ಪತಿ ಮಹಾವಿಷ್ಣು ನೆಲೆಸದ ಜಾಗದಲ್ಲಿ ಲಕ್ಷ್ಮೀ ದೇವಿಯೂ ಇರಲ್ಲ. ಹೀಗಾಗಿ ಜೀವನದಲ್ಲಿ ನಿಮಗೆ ಹೊಂದಾಣಿಕೆ, ನೆಮ್ಮದಿ, ಐಶ್ವರ್ಯಾಭಿವೃದ್ಧಿಯಾಗದು.

ಗೌರವ ಕಳೆದುಕೊಳ್ಳುತ್ತೀರಿ: ನಿಮ್ಮ ಕುಟುಂಬ, ಸಮಾಜದ ಮುಂದೆ ಗೌರವ, ನಂಬಿಕೆ ಕಳೆದುಕೊಳ್ಳುವಂತಹ ಸನ್ನಿವೇಶಗಳು ಎದುರಾದೀತು.

ಪರಿಹಾರವೇನು?
ಮಹಾವಿಷ್ಣುವಿನ ಕೋಪವಿದ್ದಲ್ಲಿ ಪ್ರತೀ ಏಕಾದಶಿಗಳಂದು ಉಪವಾಸ ವ್ರತ ಕೈಗೊಳ್ಳಿ. ಮಹಾವಿಷ್ಣುವಿನ ಕುರಿತಾದ ಸಹಸ್ರನಾಮವನ್ನು ಪಠಿಸಿ. ಧರ್ಮದ ದಾರಿಯಲ್ಲಿ ನಡೆಯುತ್ತಾ ಆಗಾಗ ಮಹಾವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡುತ್ತಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕ ನೆಮ್ಮದಿಗಾಗಿ ರಾಮ ರಕ್ಷಾ ಸ್ತೋತ್ರವನ್ನು ಓದಿ