ಬುಧವಾರ ಕೆಲಸದಲ್ಲಿ ಯಶಸ್ಸು ಸಿಗಲು ಈ ಮಂತ್ರ ಪಠಿಸಿ

Krishnaveni K
ಬುಧವಾರ, 28 ಆಗಸ್ಟ್ 2024 (08:43 IST)
ಬೆಂಗಳೂರು: ಬುಧವಾರ ಇಂದು ವಿದ್ಯಾಧಿಪತಿ ಗಣೇಶನಿಗೆ ಮೀಸಲಾದ ದಿನವಾಗಿದೆ. ಇಂದು ಈ ಒಂದು ಮಂತ್ರವನ್ನು ಹೇಳಿ ದಿನದಾರಂಭ ಮಾಡಿದರೆ ಎಲ್ಲಾ ಕೆಲಸಗಳೂ ಯಶಸ್ವಿಯಾಗುತ್ತವೆ. ಅದು ಯಾವ ಮಂತ್ರ ನೋಡಿ.

ಬುಧವಾರ ಗಣಪತಿಯನ್ನು ಪೂಜೆ ಮಾಡುವುದರಿಂದ ನಮ್ಮ  ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನೂ ಪರಿಹರಿಸಿಕೊಡುತ್ತಾನೆ. ವಿಘ್ನಗಳು ನಿವಾರಣೆಯಾಗುತ್ತವೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಯಶಸ್ಸು ತಂದುಕೊಡುತ್ತಾನೆ. ಇನ್ನು, ಉದ್ಯೋಗಿಗಳಿಗೆ ಉನ್ನತ ಸ್ಥಾನಕ್ಕೇರಲು ಸಹಾಯವಾಗುತ್ತದೆ ಎಂಬ ನಂಬಿಕೆಯಿದೆ.

ಹೀಗಾಗಿ ನಾವು ಓದುವ ಅಥವಾ ಕೆಲಸ ಮಾಡುವ ಟೇಬಲ್ ಮೇಲೆ ಗಣೇಶನ ಪುಟಾಣಿ ವಿಗ್ರಹವೊಂದನ್ನು ಇಟ್ಟುಕೊಂಡು ಪ್ರಾರ್ಥನೆ ಮಾಡಿ ಕೆಲಸ ಶುರು ಮಾಡುವುದು ಉತ್ತಮ. ಇಂದು ಗಣೇಶನ ಆಶೀರ್ವಾದ ಪಡೆಯುವುದರಿಂದ ವಿದ್ಯಾರ್ಥಿಗಳೂ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಾರೆ.

ಅದಕ್ಕಾಗಿ ಇರುವ ಸರಳ ಮಾರ್ಗವೆಂದರೆ ಈ ದಿನ ‘ಓಂ ಗಣಪತಯೇ ನಮಃ’ ಅಥವಾ ‘ಶ್ರೀ ಗಣಪತಯೇ ನಮಃ’ ಎನ್ನುವ ಮಂತ್ರವನ್ನು 108 ಬಾರಿ ಜಪಿಸಿ ಇಂದಿನ ದಿನ ಶುರು ಮಾಡಿ. ಇದರಿಂದ ನಿಮ್ಮ ಜೀವನದ ಎಲ್ಲಾ ವಿಘ್ನಗಳು ನಿವಾರಣೆಯಾಗಿ ಯಶಸ್ಸು ಕಂಡುಕೊಳ್ಳುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಲಲಿತಾ ಪಂಚರತ್ನಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

ದೀಪಾವಳಿ 2025 ಗೋ ಪೂಜೆ ಮುಹೂರ್ತ ಯಾವಾಗ

ಮುಂದಿನ ಸುದ್ದಿ
Show comments