Select Your Language

Notifications

webdunia
webdunia
webdunia
webdunia

ಸ್ವರ್ಗ ಪ್ರಾಪ್ತಿಯಾಗಬೇಕೆ…? ಹಾಗಾದ್ರೆ ನೀವು ಈ ಮೂರು ಋಣ ತೀರಿಸಲೇ ಬೇಕು

ಸ್ವರ್ಗ ಪ್ರಾಪ್ತಿಯಾಗಬೇಕೆ…? ಹಾಗಾದ್ರೆ ನೀವು ಈ ಮೂರು ಋಣ ತೀರಿಸಲೇ ಬೇಕು
ಬೆಂಗಳೂರು , ಶುಕ್ರವಾರ, 5 ಜನವರಿ 2018 (11:44 IST)
ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಷ್ಟೋ  ಒಳ್ಳೆಯ ಆಚಾರ, ಪದ್ಧತಿ ಹಾಗು ಸಂಸ್ಕಾರಗಳಿವೆ. ಇದರಲ್ಲಿ ಎಲ್ಲಾದಕೂ ಒಂದು ವಿಶೇಷ ಅರ್ಥ, ಪರಮಾರ್ಥವಿರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮಹಾಭಾರತದ ಪ್ರಕಾರ ಒಬ್ಬ ಮನುಷ್ಯ ಸತ್ತ ಮೇಲೆ ಆತನಿಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದರೆ ಆತ ಮೂರು ಋಣಗಳನ್ನು ಭೂಮಿ ಮೇಲೆ ಇರುವಾಗಲೇ ತೀರಿಸಿಕೊಳ್ಳಬೇಕು.


ಮೊದಲನೇಯದಾಗಿ ದೈವ ಋಣ - ಮನುಷ್ಯ ತನ್ನ ಜೀವನದಲ್ಲಿ ದಾನ, ಧರ್ಮ ಮಾಡುತ್ತಾ ಇದ್ದರೆ ಈ ದೈವ ಋಣ ತೀರಿಸಿದಂತಾಗುತ್ತದೆ. ಆದರೆ ದಾನ, ಧರ್ಮ ಮಾಡಲು ಸಾಮರ್ಥ್ಯವಿಲ್ಲದವರು ಜನರ ಸೇವೆ ಹಾಗು ದೇವರ ಸೇವೆ ಮಾಡಿದರೂ ಸಾಕು ಅಂತವರಿಗೂ ಸ್ವರ್ಗಲಭಿಸುತ್ತದೆ. ಒಂದುವೇಳೆ ಅವರು ಹೀಗೆ ಮಾಡದೆ ಮರಣ ಹೊಂದಿದ್ದರೆ, ಅವರ ಮನೆಯವರು ಅವರ ಹೆಸರಲ್ಲಿ ದಾನ, ಧರ್ಮ ಮಾಡಿದರೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.


ಎರಡನೇಯದಾಗಿ ಋಷಿ ಋಣ – ಮನುಷ್ಯರು ತನ್ನ ಜೀವನದಲ್ಲಿ ಸಂಪಾದಿಸಿದ ಜ್ಞಾನವನ್ನು ಬೇರೆಯವರಿಗೆ ಕಲಿಸಿಕೊಟ್ಟರೆ  ಈ ಋಷಿ ಋಣ ತೀರಿ ಸ್ವರ್ಗದ ಬಾಗಿಲು ತೆರೆಯುತ್ತದೆ.


ಮೂರನೇಯದಾಗಿ ಪಿತೃ ಋಣ – ಪಿತೃ ಋಣ ತೀರಬೇಕೆಂದರೆ ನಿಮ್ಮ ಪೂರ್ವಿಕರಿಗೆ ಶ್ರಾದ್ಧ ಕರ್ಮ ಮಾಡಿ ತರ್ಪಣ, ಪಿಂಡ ಪ್ರದಾನ ಮಾಡಬೇಕು. ಇದರಿಂದ ಪಿತೃಋಣ ತೀರಿ ಸ್ವರ್ಗ ಲಭಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿನಾಯಕನನ್ನು ಪೂಜಿಸುವಾಗ ಈ ಪುಷ್ಪವನ್ನು ಇಟ್ಟು ಪೂಜಿಸಿದರೆ ಸರ್ವನಾಶ ಖಂಡಿತ