Daily Horoscope

Select Your Language

Notifications

webdunia
webdunia
webdunia
webdunia

ಮೇಷ ರಾಶಿಯವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು Video

Astrology
ಜ್ಯೋತಿಷ್ಯ ಪ್ರಕಾರ ಮೇಷ ರಾಶಿಯವರು ತಮ್ಮ ರಾಶಿಗೆ ಅನುಗುಣವಾಗಿ ಯಾವ ಆಹಾರ ಸೇವಿಸಿದರೆ ಆರೋಗ್ಯವಾಗಿರುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ.

ಉತ್ತಮ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುವುದು. ಎಲ್ಲಾ ರಾಶಿಗೂ ಅದರದ್ದೇ ಆದ ದೇಹ ಪ್ರಕೃತಿಯಿರುತ್ತದೆ. ಅದೇ ರೀತಿ ಮೇಷ ರಾಶಿಯವರು ಉಷ್ಣ ಪ್ರಕೃತಿ ದೇಹ ಹೊಂದಿರುತ್ತಾರೆ. ಮೇಷ ರಾಶಿಯವರು ಸೇವಿಸಬೇಕಾದ ತರಕಾರಿ, ಹಣ್ಣು, ಧಾನ್ಯ, ಮಸಾಲೆ ಪದಾರ್ಥಗಳು ಯಾವುವು ಇಲ್ಲಿದೆ ನೋಡಿ ವಿವರ.

ತರಕಾರಿಗಳು: ಈರುಳ್ಳಿ, ಮೂಲಂಗಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ
ಹಣ್ಣುಗಳು: ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಸ್ಟ್ರಾಬೆರಿ
ಧಾನ್ಯಗಳು: ಕಂದು ಅಕ್ಕಿ, ಹುರುಳಿ ಕಾಳು, ವಾಲ್ ನಟ್
ಮಸಾಲೆ: ಸಾಸಿವೆ ಕಾಳು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು

ಇದರ ಹೊರತಾಗಿ ಬೇರೆ ತರಕಾರಿ, ಧಾನ್ಯಗಳನ್ನು ಸೇವಿಸಬಾರದು ಎಂದಲ್ಲ. ಆದರೆ ಈ ರಾಶಿಯವರಿಗೆ ಈ ಆಹಾರ ವಸ್ತುಗಳು ಸೂಕ್ತ. ಇದರ ಜೊತೆಗೆ ಮೇಷ ರಾಶಿಯವರು ಹೆಚ್ಚು ನೀರು ಸೇವನೆ ಮಾಡುವುದು, ಪೊಟ್ಯಾಶಿಂಯ ಹೇರಳವಾಗಿರುವ ಆಹಾರ ಸೇವನೆ ಮಾಡುವುದು ಸೂಕ್ತ.



Share this Story:

Follow Webdunia kannada

ಮುಂದಿನ ಸುದ್ದಿ

ಕುಜ ಗ್ರಹ ದೋಷವಿದ್ದರೆ ಈ ಸ್ತೋತ್ರವನ್ನು ಓದಿ