Webdunia - Bharat's app for daily news and videos

Install App

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

Webdunia
ಗುರುವಾರ, 19 ಜುಲೈ 2018 (13:14 IST)
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೯/೭/೧೮ ಗುರುವಾರ ಸಪ್ತಮಿ ತಿಥಿ ಮಧ್ಯಾಹ್ನ ೧.೪೦ ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಹಸ್ತ ಬೆಳಗ್ಗೆ ೭/೫೩ರ ವರೆಗೆ  ಸೂರ್ಯೊದಯ ೬-೧೬ ಸೂರ್ಯಾಸ್ತ ೭-೧. ರಾಹುಕಾಲ. ಮದ್ಯಾಹ್ನ ೧.೩೦ರಿಂದ೩ಘಂಟೆ  ಅಷ್ಟಮಿ ಶ್ರಾದ್ದಾದಿಗಳನ್ನ ಇವತ್ತು ಮಾಡಬೇಕು ದಿನಶುದ್ದಿ ಇದೆ. ಕನ್ಯಾ ಚಂದ್ರ ರಾತ್ರಿ ೮ರ ವರೆಗೆ ಇರುವುದರಿಂದ ಪೂಜೆಗಳಿಗೆ ವೃತಕ್ಕೆ ಉತ್ತಮ. ಹೋಮ ಹವನಾದಿಗಳಿಗೆ ಅಗ್ನಿ ಇರುವುದಿಲ್ಲ. 
 
ರಾಶಿ ಫಲ
 
ಮೇಷ:  ಚಿಕ್ಕ ಪ್ರಮಾಣದಲ್ಲಿ ಅಪಘಾತ ಭಯ ಕಾಡಲಿದ್ದು ಸುರಕ್ಷತಾ ಕ್ರಮವನ್ನು ಅನುಸರಿಸುವುದು ಸೂಕ್ತ.
 
ವೃಷಭ : ಸಣ್ಣ ಪ್ರವಾಸ, ಆರ್ಥಿಕ ಅನುಕೂಲ, ಈದಿನ ಚಿಕ್ಕ ಪ್ರವಾಸ ಸಾದ್ಯತೆ ಇದ್ದು ಆರ್ಥಿಕವಾಗಿ ಉತ್ತಮದಿನವಾಗಿದೆ. 
 
ಮಿಥುನ;  ಮನೆಯಲ್ಲಿ ಶುಭಕಾರ್ಯ. ಬಂದುಗಳ ಆಗಮನ ಆನಂದದ ಸಮಯ. ಕರ್ಕ; ಶುಭವಾರ್ತೆ. ಕೋರ್ಟವ್ಯಾಜ್ಯ ವಿಚಾರಣೆ, ದೈವಾರಾಧನೆಯಿಂದ ಶುಭ 
 
ಸಿಂಹ :ಧನಾಗಮನ ಶತ್ರು ಪೀಡೆ, ಧನಾಗಮನದ ಜೊತೆಗೆ ವಿಧಿಯ ಆಟದಂತೆ ಶತ್ರುಗಳ ಪೀಡೆಯೂ ಬಾಧಿಸಲಿದ್ದು ಗುರು ಸ್ಮರಣೆ ಮಾಡಿ.
 
ಕನ್ಯಾ. ಅಧಿಕ ಖರ್ಚು, ವೃಥಾ ಅಲೆದಾಟ, ಮಾನಸಿಕವಾಗಿ ಇಲ್ಲದ ನೆಮ್ಮದಿ, ಲಕ್ಷ್ಮೀನೃಸಿಂಹನ ಸ್ಮರಣೆ ಮಾಡಿರಿ 
 
ತುಲಾ; ಧನಹಾನಿ ವೃಥಾ ಸಂಚಾರ, ಕೆಲಸವಾಗದೇ ಇರುವ ಬೇಸರ, ಚಿಂತೆಯಿಂದ ಕಲಹ.
 
ವೃಶ್ಚಿಕ; ಶನಿ ಪೀಡೆ ಹಲ್ಲುನೋವು. ಮಹತ್ವದ ಕೆಲಸ, ಶನೈಶ್ವರನು ಎಚ್ಚರಿಸುತ್ತಿದ್ದು, ಮಹತ್ವದ ಕೆಲಸ ಘಠಿಸಲಿದೆ. 
 
ಧನು; ಸಂಕಷ್ಟ, ಕುಟುಂಬ ಕಲಹ, ವಂಚನೆ. ಮೊದಲೇ ಕುಡಟುಂಬದಲ್ಲಿನ ಆಂತರಿಕ ಕಲಹದಿಂದ ಬೇಸರದಲ್ಲಿರುವ ಈ ರಾಶಿಯವರಿಗೆ ವಂಚನೆ ಮಾಡುವವರೂ ಇದ್ದಾರೆ, ಎಚ್ಚರಿಕೆ ಅಗತ್ಯ.
 
ಮಕರ; ದೂರ ಪ್ರವಾಸ, ಉಲ್ಲಾಸದಾಯಕ ದಿನ, ಕ್ಷೇತ್ರ ದರ್ಶನದ ಸಾಧ್ಯತೆ
 
ಕುಂಭ ;ಕಾರ್ಯಕ್ಕೆ ಅಡೆತಡೆ, ಯಾವುದೇ ಕೆಲಸ ಮಾಡೋಣವೆಂದರೂ ಚಿಕ್ಕ ಪುಟ್ಟ ಅಡೆತಡೆಗಳು ತಲೆಕೆಡಿಸುತ್ತವೆ, ದೈವಾರಾಧನೆಯಿಂದ ಮುನ್ನಡೆಯಿರಿ.
 
ಮೀನ; ಒಳ್ಳೆ ಖರಿದಿ. ಸಂತೋಷದ ದಿನ.ಖರೀದಿಯಿಂದಾಗಿ ಸಂತೋಷ ವೃಧ್ಧಿಯಾಗಲಿದ್ದು, ತಮ್ಮ ಸ್ನೇಹಿತರನ್ನೂ ಸಂತೋಷಪಡಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments