ಪ್ರಶಾಂತ್ ಭಟ್ ಹೆಗ್ಗಾರ್
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ಸೋಮವಾರ ದಿನಾಂಕ ೧೬/0೭/೧೮
ಚತುರ್ಥಿ ತಿಥಿ ಸಾಯಂ ೬/೪೧ ರವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಮಘಾ. ಬೆಳಗ್ಗೆ ೧೧/೧೨ ವರೆಗೆ , ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಮುಂಜಾನೆ೭.೩೦ ರಿಂದ ೯ ಘಂಟೆಯವರೆಗೆ. ಇವತ್ತು ಹೋಮ ಹವನಾದಿ ಕಾರ್ಯಕ್ಕೆ ಅಗ್ನಿ ಇರುತ್ತದೆ. ಸಂಕ್ರಾಂತಿ; ಚತುರ್ಥಿ ಶ್ರಾದ್ದಾದಿಗಳನ್ನ ಇವತ್ತು ನಡೆಸತಕ್ಕದ್ದು.ಇಂದು ವರಚತುರ್ಥೀ ವೃತಾಚರಣೆ ರಾಜ್ಯದ ಕೆಲ ಭಾಗದಲ್ಲಿ ಜಾರಿಯಲ್ಲಿದ್ದು, ನಾಳಿನ ದಿನ( ಜುಲೈ 17) ಕರ್ಕಾಟಕ ಸಂಕ್ರಾಂತಿಯ ; ದಕ್ಷಿಣಾಯಣ ಪ್ರಾರಂಭದ ದಿನವಾಗಿದೆ.
ಕರ್ಕ. ಸಿಂಹ. ಕನ್ಯಾ.ವೃಷ್ಚಿಕ. ರಾಶಿಯವರಿಗೆ ಉತ್ತಮ
ಧನು. ಮಕರ. ಕುಂಭ. ವೃಷಭ. ಮಿಥುನ. ರಾಶಿಯವರಿಗೆ ಮಧ್ಯಮ.
ಮೇಷ.ತುಲಾ.ಮೀನ ರಾಶಿಯವರಿಗೆ ಅಶುಭ. ಈ ರಾಶಿಗಳವರು ಶಿವಾರಾಧನೆ ಮಾಡಿರಿ..