Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಗಣೇಶ ವಿಗ್ರಹವನ್ನಿಟ್ಟು ಪೂಜಿಸುವವರಿಗೆ ಈ ವಿಚಾರ ತಿಳಿದಿರಲಿ

ಮನೆಯಲ್ಲಿ ಗಣೇಶ ವಿಗ್ರಹವನ್ನಿಟ್ಟು ಪೂಜಿಸುವವರಿಗೆ ಈ ವಿಚಾರ ತಿಳಿದಿರಲಿ
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (09:13 IST)
ಬೆಂಗಳೂರು :ಶುಕ್ಲಪಕ್ಷದ ಭಾದ್ರಪದ ಮಾಸ ಚತುರ್ತಿಯ ದಿನದಂದು ಗಣೇಶ ಚೌತಿಯನ್ನು ಆಚರಿಸಲಾಗುತ್ತದೆ. ಅಂದು ಕೆಲವರು ತಮ್ಮ ಮನೆಯಲ್ಲಿ ಗಣೆಶನ ವಿಗ್ರಹವನ್ನಿಟ್ಟು ಪೂಜೆ ಮಾಡುತ್ತಾರೆ. ಆ ವೇಳೆ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು.



ಗಣೇಶ ಚತುರ್ಥಿಯಂದು ನೀವು ಪೂಜಿಸುವ ಗಣೇಶ ವಿಗ್ರಹದ ಸೊಂಡಿಲು ಎಡಕ್ಕೆ ಇರಬೇಕು. ನೀವು ಮನೆಯಲ್ಲಿ ಗಣೇಶನ ವಿಗ್ರಹವನ್ನು ಇಡುವ ಸ್ಥಳದಲ್ಲಿ ವಿಗ್ರಹದ ಬೆನ್ನ ಹಿಂದೆ ಮನೆಯ ಕೋಣೆಗಳು ಇರಬಾರದು. ಹಾಗೇ ಮನೆಯ ದಕ್ಷಿಣ ಭಾಗದಲ್ಲಿ ಗಣೇಶನನ್ನು ಇಡಬಾರದು, ಗಣೇಶನ ವಿಗ್ರಹವನ್ನು ವಾಯುವ್ಯ ದಿಕ್ಕಿನಲ್ಲಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು. ಇಲ್ಲವಾದರೆ ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಗಣೇಶ ವಿಗ್ರಹವನ್ನು ಇಡಿ.

 

ಶೌಚಾಲಯದ ಗೋಡೆಗೆ ತಾಗಿರುವ ಸ್ಥದಲ್ಲಿ ಗಣೇಶನನ್ನು ಇಡಬೇಡಿ. ಹಾಗೇ ಮನೆಯ ಮಹಡಿಯ ಮೆಟ್ಟಿಲಿನ ಕೆಳಗೆ ಗಣೇಶ ವಿಗ್ರಹ ಇಡಬೇಡಿ. ಹೀಗೆ ಪೂಜಿಸಿದರೆ ಸುಖ ಸಮೃದ್ಧಿ ನೆಮ್ಮದಿ ನಿಮ್ಮದಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಿ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?