Select Your Language

Notifications

webdunia
webdunia
webdunia
Friday, 11 April 2025
webdunia

ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಇಂದಿನಿಂದ ಜಾರಿ ಇಲ್ಲ

ಬೆಂಗಳೂರು
ಬೆಂಗಳೂರು , ಭಾನುವಾರ, 1 ಸೆಪ್ಟಂಬರ್ 2019 (10:50 IST)
ಬೆಂಗಳೂರು : ಇಂದಿನಿಂದ ಜಾರಿಗೆ ಬರಲಿದೆ ಎಂದ ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಸದ್ಯಕ್ಕೆ  ರಾಜ್ಯದಲ್ಲಿ ಜಾರಿ ಇಲ್ಲ ಎಂಬುದಾಗಿ ತಿಳಿದುಬಂದಿದೆ.




ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದು, ಅದು ಇಂದಿನಿಂದ ಜಾರಿಗೆ ಬರಲಿದೆ ಎನ್ನಲಾಗಿತ್ತು. ಆದರೆ ರಾಜ್ಯ ಪೊಲೀಸರಿಗೆ ಈ ಕುರಿತು ಇನ್ನೂ ಆದೇಶ ತಲುಪಿಲ್ಲವಾದ ಸದ್ಯಕ್ಕೆ ಹೊಸ ದಂಡ ವಿಧಿಸದಿರಲು ತೀರ್ಮಾನಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.


ಆದೇಶ ಬಂದ ಬಳಿಕವೂ ಹೊಸ ದಂಡದ ಮೊತ್ತವನ್ನು ಅಳವಡಿಸಿಕೊಳ್ಳಬೇಕಾದ ಕಾರಣ ಹೊಸ ದಂಡದ ನಿಯಮ ಜಾರಿಗೊಳ್ಳಲು ಸ್ವಲ್ಪ ಕಾಲ ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಹೀಗಾಗಿ ಸದ್ಯಕ್ಕೆ ಹಳೆ ನಿಯಮವನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾದಲ್ಲಿ ಈ ಕಾರಣಕ್ಕೆ ಶ್ವಾನಕ್ಕೆ ಪ್ರಶಸ್ತಿ ನೀಡಿ ಸನ್ಮಾನ