ಈ ರಾಶಿಯವರ ಮೇಲೆ ಮಹಾವಿಷ್ಣುವಿನ ಕೃಪೆ ಜಾಸ್ತಿ

Krishnaveni K
ಶನಿವಾರ, 17 ಆಗಸ್ಟ್ 2024 (08:28 IST)
ಬೆಂಗಳೂರು: ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾವಿಷ್ಣುವಿನ ಆರಾಧನೆ ಮಾಡುವವರು ಅನೇಕರಿದ್ದಾರೆ. ಕೆಲವು ರಾಶಿಯವರ ಮೇಲೆ ಮಹಾವಿಷ್ಣುವಿನ ವಿಶೇಷ ಕೃಪೆ ಯಾವಾಗಲೂ ಇರುತ್ತದೆ. ಆ ರಾಶಿಗಳು ಯಾವುವು ನೋಡೋಣ.

ವೃಷಭ
ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಗ್ರಹ ಲಕ್ಷ್ಮಿ ಅಂಶವಾಗಿದೆ. ಹೀಗಾಗಿ ಈ ರಾಶಿಯವರ ಮೇಲೆ ಮಹಾವಿಷ್ಣುವಿನ ಕೃಪೆ ವಿಶೇಷವಾಗಿರುತ್ತದೆ. ಈ ರಾಶಿಯವರು ಮಹಿಳೆಯರನ್ನು ಗೌರವದಿಂದ ಕಾಣಬೇಕು. ಇದರಿಂದ ಲಕ್ಷ್ಮಿಯನ್ನು ಗೌರವಿಸಿದಂತೆ. ಎಲ್ಲಿ ಲಕ್ಷ್ಮಿಗೆ ಗೌರವ ಸಿಗುತ್ತದೋ ಅಲ್ಲಿ ಮಹಾವಿಷ್ಣು ಸಂಪ್ರೀತನಾಗುತ್ತಾನೆ.

ಕರ್ಕಟಕ ರಾಶಿ
ಈ ರಾಶಿಯವರು ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಂಡರೆ ಅವರ ಮೇಲೆ ಮಹಾವಿಷ್ಣುವಿನ ಅನುಗ್ರಹವಿರುತ್ತದೆ. ಈ ರಾಶಿಯವರಿಗೆ ಚಂದ್ರ ಅಧಿಪತಿಯಾಗಿರುತ್ತಾನೆ. ಈ ರಾಶಿಯವರು ವಿಷ್ಣುವಿನ ಆರಾಧನೆ ಮಾಡುವುದರಿಂದ ಮೋಕ್ಷ ಸಿಗುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಶ್ರೀಹರಿಯ ಅಂಶವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ವಿಷ್ಣುವಿನ ಅನುಗ್ರಹ ಸದಾ ಸೂರ್ಯನ ಮೇಲಿರುತ್ತದೆ. ಇದರಿಂದಾಗಿ ಸಿಂಹ ರಾಶಿಯವರ ಮೇಲೆ ಮಹಾವಿಷ್ಣುವಿನ ಕೃಪೆಯಿರುತ್ತದೆ.
ತುಲಾ
ವೃಷಭ ರಾಶಿಯಂತೇ ತುಲಾ ರಾಶಿಯವರಿಗೂ ಶುಕ್ರ ಅಧಿಪತಿ. ಮೇಲೆ ಹೇಳಿದಂತೇ ಶುಕ್ರ ಲಕ್ಷ್ಮಿಯ ಅಂಶವಾಗಿರುವುದರಿಂದ ಮಹಾವಿಷ್ಣುವಿನ ಕೃಪೆ ಈ ರಾಶಿಯವರಿಗಿದ್ದೇ ಇರುತ್ತದೆ. ತುಲಾ ರಾಶಿಯನ್ನು ಮಹಾವಿಷ್ಣುವಿನ ನೆಚ್ಚಿನ ರಾಶಿ ಎಂದೇ ಪರಿಗಣಿಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments