Select Your Language

Notifications

webdunia
webdunia
webdunia
webdunia

ನಿಮ್ಮ ಅತ್ತೆಯ ರಾಶಿ ಇದುವೇನಾ ಅಂತ ನೋಡಿಕೊಳ್ಳಿ

Mother in law

Krishnaveni K

ಬೆಂಗಳೂರು , ಬುಧವಾರ, 6 ಮಾರ್ಚ್ 2024 (08:37 IST)
ಬೆಂಗಳೂರು: ಪ್ರತಿಯೊಂದು ಮನೆಯಲ್ಲಿಯೂ ಅತ್ತೆ-ಸೊಸೆ ಚೆನ್ನಾಗಿದ್ದರೆ ಆ ಮನೆ ಅತ್ಯಂತ ಸಂತೋಷ, ನೆಮ್ಮದಿಯಿಂದ ಕೂಡಿರುತ್ತದೆ ಎನ್ನಬಹುದು. ಹಾಗಿದ್ದರೆ ಅತ್ತೆಯಂದಿರು ಸೊಸೆಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕಾದರೆ ಅವರ ರಾಶಿ ಇವುಗಳಾಗಿರಬೇಕು.

ಎಲ್ಲಾ ರಾಶಿಯವರು ಒಳ್ಳೆಯ ಅತ್ತೆಯಂದಿರಾಗಲು ಸಾಧ್ಯವಿಲ್ಲ. ಜೀವನದಲ್ಲಿ ಬೆಸ್ಟ್ ಅತ್ತೆಯಂದಿರು ಎನಿಸಿಕೊಳ್ಳಬೇಕೆಂದರೆ ಮನೆಗೆ ಬಂದ ಸೊಸೆಯನ್ನು ಮಗಳಂತೇ ಕಾಣಬೇಕು. ಕೆಲವೊಂದು  ಮನೆಯಲ್ಲಿ ಅತ್ತೆ-ಸೊಸೆಯ ನಡುವೆ ಹಾವು-ಮುಂಗುಸಿ ರೀತಿ ಜಗ್ಗಾಟವಿರುತ್ತದೆ. ಒಳ್ಳೆಯ ಅತ್ತೆ ಸಿಗಲು ಪುಣ್ಯ ಮಾಡಿರಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಕೇವಲ ಪುಣ್ಯ ಮಾಡಿದರೆ ಸಾಲದು. ಒಳ್ಳೆಯ ಅತ್ತೆಯಂದಿರು ಸಿಗಬೇಕಾದರೆ ಅವರ ರಾಶಿಯೂ ಕೈ ಹಿಡಿಯಬೇಕು.

ಸೊಸೆಯನ್ನು ಮಗಳಂತೆ ಕಾಣುವ ನಾಲ್ಕು ರಾಶಿಗಳೆಂದರೆ ಕರ್ಕಟಕ ರಾಶಿ, ತುಲಾ ರಾಶಿ, ಕನ್ಯಾ ರಾಶಿ ಮತ್ತು ಮೀನ ರಾಶಿಯವರು. ಈ ನಾಲ್ಕು ರಾಶಿಯವರು ಸೊಸೆಯನ್ನು ತಮ್ಮ ಮಗಳಂತೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಪ್ರತಿಯೊಂದು ರಾಶಿಯ ಅತ್ತೆಯಂದಿರ ಗುಣ ಸ್ವಭಾವ ನೋಡೋಣ.

ಕರ್ಕಟಕ ರಾಶಿ: ಸೊಸೆಯನ್ನು ಯಾವತ್ತೂ ಬೆಂಬಲಿಸುವ ಮತ್ತು ಮಗಳಂತೆ ಕಾಣುವ ಸ್ವಭಾವದವರಾಗಿರುತ್ತಾರೆ.
ತುಲಾ ರಾಶಿ: ಈ ರಾಶಿಯ ಅತ್ತೆಯಂದಿರು ಸಮಾಧಾನಕರವಾಗಿ ವರ್ತಿಸುತ್ತಾರೆ. ಹೀಗಾಗಿ ಮನೆಯಲ್ಲಿ ಘರ್ಷಣೆ ನಡೆಯಲು ಬಿಡಲ್ಲ.
ಕನ್ಯಾ ರಾಶಿ: ಸೊಸೆಯ ಅಗತ್ಯಗಳನ್ನು ಅರಿತು ಅದರಂತೆ ನಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಾರೆ.
ಮೀನ ರಾಶಿ: ಈ ರಾಶಿಯ ಅತ್ತೆಯಂದಿರು ಸೊಸೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?