ಈ ರಾಶಿಯವರಿಗೆ ರಾಹುವಿನಿಂದ ಶುಭವಾಗುತ್ತದೆ

Krishnaveni K
ಬುಧವಾರ, 20 ಮಾರ್ಚ್ 2024 (10:40 IST)
ಬೆಂಗಳೂರು: ರಾಹು ಎಂದರೆ ಸಾಕು, ಅವನಿಂದ ನಮಗೆ ಕೆಟ್ಟದ್ದೇ ಆಗುತ್ತದೆ ಎಂಬುದು ನಮ್ಮಲ್ಲಿರುವ ನಂಬಿಕೆ. ಆದರೆ ಎಲ್ಲಾ ಗ್ರಹಗಳೂ ಸದಾ ಕೆಟ್ಟ ಫಲಗಳನ್ನೇ ನೀಡಬೇಕು ಎಂದೇನಿಲ್ಲ.

ಉದಾಹರಣೆಗೆ ಶನಿಯೂ ಕೂಡಾ ನಮಗೆ ಲಾಭಕಾರಕನಾದರೆ ನಮ್ಮ ಜೀವನಕ್ಕೆ ಅಷ್ಟೈಶ್ವರ್ಯವನ್ನೂ ತಂದುಕೊಡಬಲ್ಲನು. ಅದೇ ರೀತಿ ರಾಹು ಗ್ರಹನೂ ಕೂಡಾ. ರಾಹು ಕೆಲವೊಂದು ರಾಶಿಯವರಿಗೆ ಶುಭಪ್ರದನೂ, ಲಾಭದಾಯಕನೂ ಆಗಿರುತ್ತಾನೆ. ಆ ರಾಶಿಗಳು ಯಾವುವು ನೋಡೋಣ.

ಮೇಷ:  ಈ ರಾಶಿಯವರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗದಂತೆ ರಾಹು ನೋಡಿಕೊಳ್ಳುತ್ತಾನೆ. ವೈವಾಹಿಕ ಜೀವನದಲ್ಲಿ ರಾಹುವಿನ ಕೃಪೆಯಿಂದ ಸಂತೋಷ, ನೆಮ್ಮದಿ ಸಿಗುತ್ತದೆ.
ಮಕರ ರಾಶಿ: ಈ ರಾಶಿಯವರಿಗೆ ರಾಹುವಿನ ಕೃಪಾಕಟಾಕ್ಷದಿಂದ ಕಾರ್ಯಸಿದ್ಧಿ, ಸಂತೋಷ, ಸಮೃದ್ಧಿ ಸಿಗುತ್ತದೆ. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ವಿಯಾಗುತ್ತಾರೆ.
ಕರ್ಕಟಕ: ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ ರಾಹುವಿನ ಕೃಪೆಯಿಂದ ಅವರಿಗೆ ಸಾಕಷ್ಟು ಅಭಿವೃದ್ಧಿ, ಲಾಭಗಳಾಗುತ್ತವೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ರಾಹುವಿನಿ ಕೃಪೆಯಿಂದ ಮಾನಸಿಕವಾಗಿ ಒತ್ತಡಗಳು ಕಡಿಮೆಯಾಗಿ ಸುಖ, ಶಾಂತಿ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments