ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುತ್ತೇವೆ. ಹಾಗೇ ಮನೆಯ ಗೋಡೆಗಳಿಗೆ ಹಾಕುವ ಬಣ್ಣಗಳನ್ನು ಕೂಡ ವಾಸ್ತು ಪ್ರಕಾರ ಹಾಕಿದರೆ ಉತ್ತಮ. ಇಲ್ಲವಾದರೆ ಹಲವಾರು ಸಮಸ್ಯೆಗಳು ಕಾಡುತ್ತವೆ.
ನಿಮ್ಮ ಮನೆಯ ಆಗ್ನೇಯ ದಿಕ್ಕಿನ ಗೋಡೆಗೆ ಹಳದಿ ಬಣ್ಣವನ್ನು ಹಾಕಿದರೆ ಅದು ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಮನೆಯ ಈ ಭಾಗದಲ್ಲಿ ಹಳದಿ ಬಣ್ಣವನ್ನು ಬಳಸಿದರೆ ತಾಯಿಗೆ ಸಮಸ್ಯೆಯಾಗುತ್ತದೆ. ಇದು ಮನೆಯ ಯಜಮಾನನಿಗೆ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ. ಮನೆಯ ಸದಸ್ಯರಲ್ಲಿ ಹೊಟ್ಟೆಯ ಸಮಸ್ಯೆ ಕಾಡುತ್ತದೆ.