ಬಂಗಾರದ ಉಂಗುರವನ್ನು ಈ 5 ರಾಶಿಯವರು ಧರಿಸಿದರೆ ಶುಭಫಲ ಸಿಗಲಿದೆ

ಗುರುವಾರ, 15 ಆಗಸ್ಟ್ 2019 (07:21 IST)
ಬೆಂಗಳೂರು : ಸಾಮಾನ್ಯವಾಗಿ ಬೆರಳುಗಳಲ್ಲಿ ಬಂಗಾರದ ಉಂಗುರಗಳನ್ನು ಹಲವರು ಧರಿಸಿರುತ್ತಾರೆ. ಆದರೆ ಎಲ್ಲಾ ರಾಶಿಯವರಿಗೂ ಇದರಿಂದ ಶುಭಫಲ ಸಿಗುವುದಿಲ್ಲ. ಕೆಲವು ರಾಶಿಗಳವರಿಗೆ ಮಾತ್ರ  ಬಂಗಾರದ ಉಂಗುರವನ್ನು ಧರಿಸುವುದರಿಂದ ಬರೀ ಲಾಭವೇ ಆಗುತ್ತದೆ. ಆ ರಾಶಿಗಳು ಯಾವುದೆಂಬುದನ್ನು ತಿಳಿಯಬೇಕಾ.
*ಮೇಷ ರಾಶಿ:ಈ ರಾಶಿಯವರು ಬಂಗಾರದ ಉಂಗುರವನ್ನು ಧರಿಸಿದರೆ ತುಂಬಾ ಲಾಭವಾಗುತ್ತದೆ. ಇದರಿಂದ ಅವರಿಗೆ ತುಂಬಾ ಶುಭ ಫಲ ಪ್ರಾಪ್ತಿಯಾಗಲಿದೆ.

* ಸಿಂಹ ರಾಶಿ:ಭಾರತೀಯ ಜ್ಯೋತಿಷ್ಯದ ಪ್ರಕಾರ ಬಂಗಾರದ ಉಂಗುರವನ್ನು ಸಾಕ್ಷಾತ್ ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ. ನೀವು ಈ ಉಂಗುರವನ್ನು ಧರಿಸಿದರೆ ನಿಮಗೆ ವ್ಯಾಪಾರದಲ್ಲಿ ಅತ್ಯಂತ ಹೆಚ್ಚಿನ ಲಾಭವಾಗುತ್ತದೆ.

*ಕನ್ಯಾ ರಾಶಿ:ಕನ್ಯಾ ರಾಶಿಯವರಿಗೆ ಕೂಡ ಬಂಗಾರದ ಉಂಗುರವನ್ನು ಧರಿಸುವುದು ಅತ್ಯಂತ ಶುಭಕರವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಉತ್ತಮವಾದ ಜೀವನ ಸಂಗಾತಿಯ ಪ್ರಾಪ್ತಿಯಾಗಲಿದ್ದಾರೆ. ಮತ್ತು ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳು ಪೂರ್ಣಗೊಳ್ಳುತ್ತವೆ.

* ತುಲಾ ರಾಶಿ:ತುಲಾ ರಾಶಿಯವರಿಗೂ ಕೂಡಾ ಬಂಗಾರದ ಉಂಗುರವನ್ನು ಧರಿಸುವುದು ತುಂಬಾ ಲಾಭಕರವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ನೌಕರಿಯಲ್ಲಿ ಉನ್ನತ ಮಟ್ಟದ ಸ್ಥಾನಮಾನ ಲಭಿಸಲಿದೆ.

* ಕುಂಭ ರಾಶಿ:ಈ ರಾಶಿಯವರು ಬಂಗಾರದ ಉಂಗುರವನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತೀರ. ಇದರ ಜೊತೆಗೆ ನಿಮ್ಮ ಜೀವನದಲ್ಲಿರುವ ಕಷ್ಟಗಳು ಸಹ ತೀರಿ ಹೋಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇವರಿಗೆ ಯಾವ ಎಣ್ಣೆಯಿಂದ ದೀಪ ಬೆಳಗಿದರೆ ಏನು ಫಲ ಸಿಗುತ್ತದೆ ಎಂಬುದು ತಿಳಿಬೇಕಾ?