ಈ ಮಂತ್ರ ಪಠಿಸಿದರೆ ಜೀವನದಲ್ಲಿ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬಹುದಂತೆ!

ಬುಧವಾರ, 3 ಜನವರಿ 2018 (07:25 IST)
ಬೆಂಗಳೂರು : ನಮ್ಮ ಹಿಂದೂ ಆಚಾರದಲ್ಲಿ ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಹಾಗೆ ನಾವು ಯಾವುದಾದರೂ ಕಳೆದುಕೊಂಡಿರುವ ವಸ್ತುಗಳು, ಆಸ್ತಿ, ಮನಶಾಂತಿಯನ್ನು ಮತ್ತೆ ವಾಪಾಸು ಪಡೆಯಲು ಒಂದು ಒಳ್ಳೆಯ ಪರಿಹಾರವಿದೆ. ಅದೇನೆಂದರೆ ‘ಕಾರ್ತವೀರ್ಯಾರ್ಜುನ ಮಂತ್ರ’.


ಈ ಮಂತ್ರವನ್ನು ಜಪಿಸುವ ಮೊದಲು ಪಾಲಿಸಬೇಕಾದ ಒಂದು ನಿಯಮವಿದೆ. ಅದೇನೆಂದರೆ ಸ್ನಾನ ಮಾಡಿ ಶುಚಿಯಾಗಿ, ಮನಸ್ಸು ಸ್ಪೂರ್ತಿಯಾಗಿ ಈ ಮಂತ್ರವನ್ನು ಜಪಿಸಬೇಕು.
ಓಂ ಕಂ ಕಾರ್ತವೀರ್ಯಾರ್ಜುನೋ ನಾಮ ರಾಜಾ    
ಬಾಹುಸಹಸ್ರವಾನ್|
ಹ್ರೀಂ ತಸ್ಯ ಸ್ಮರಣಾದೇವ ಹತಂ ನಷ್ಟಂಚ
ಲಭ್ಯತೇ|
ಕ್ರೋಂ ಸಹಸ್ರಾರ ಹುಂಫಟ್ ಕ್ರೋಂ ಹ್ರೀಂ ಓಂ|


ಈ ಕಾರ್ತವೀರ್ಯಾರ್ಜುನ ಯಾರೆಂದರೆ ಮಹಾ ವಿಷ್ಣುವಿನ ಬಲಕೈನಲ್ಲಿರು ಸುದರ್ಶನ ಚಕ್ರ. ಈ ಚಕ್ರಕ್ಕೆ ವಿಷ್ಣು ರಾಕ್ಷಸರನ್ನು ಸಂಹರಿಸಲು ತಾನೆ ಸಹಾಯ ಮಾಡುತ್ತಿರುವುದು ಎಂಬ ಅಹಂಕಾರವಿತ್ತು. ಆದ ಕಾರಣ ವಿಷ್ಣು ಅದಕ್ಕೆ ಮನುಷ್ಯನಾಗಿ ಹುಟ್ಟುಬೇಕೆಂದು ಹೇಳಿದನು. ಅದೇರೀತಿ ಚಕ್ರವು ಕೈಗಳಿಲ್ಲದ ಮನುಷ್ಯನಾಗಿ ಭೂಮಿ ಮೇಲೆ  ಕಾರ್ತವೀರ್ಯಾರ್ಜುನ ಎಂಬ ಹೆಸರಿನಲ್ಲಿ ಜನ್ಮತಾಳಿತು.

ನಂತರ  ಕಾರ್ತವೀರ್ಯಾರ್ಜುನ ದತ್ತಾತ್ರೇಯನನ್ನು ಪೂಜಿಸಿ ಸಾವಿರ ಕೈಗಳನ್ನು ಪಡೆದನು. ಆದ್ದರಿಂದ ಆತನನ್ನು ಸಹಸ್ರ ಬಾಹು ಎನ್ನುತ್ತಾರೆ. ಹೀಗೆ ಕಾರ್ತವೀರ್ಯಾರ್ಜುನ ಕೈಗಳನ್ನು ಪಡೆದು ಮತ್ತೆ ವಿಷ್ಣುವಿನ ಕೈಸೇರಿ ಚಕ್ರವಾಗಿ ಬದಲಾಗುತ್ತಾನೆ. ಅದೇರೀತಿ ಕಾರ್ತವೀರ್ಯಾರ್ಜುನ ಮಂತ್ರ’ ಜಪಿಸುವುದರಿಂದ  ನಾವು ಕಳೆದುಕೊಂಡ ವಸ್ತು ಪುನಃ ನಮಗೆ  ಸಿಗುತ್ತದೆ ಎಂಬ  ನಂಬಿಕೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಯಲ್ಲಿ ಅನ್ನಕ್ಕೆ ಬರಗಾಲ ಬರಬಾರದೆಂದರೆ ಏನು ಮಾಡಬೇಕು ಗೊತ್ತಾ...?