Publish Date: Tue, 06 Oct 2026 (10:33 IST)
Updated Date: Tue, 06 Oct 2026 (10:38 IST)
ಶ್ರೀ ಕಾಳಿ ದೇವಿಯ ಅತ್ಯಂತ ಶಕ್ತಿಶಾಲಿ ಹಾಗೂ ಮೂಲ ಏಕಾಕ್ಷರ ಮಂತ್ರ ಏಕಾಕ್ಷರ ಮತ್ತು ಬೀಜಮಂತ್ರಗಳನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಶುದ್ಧ ಮನಸ್ಸಿನಿಂದ ಜಪಿಸಬೇಕು.
"ಕ್ರೀಂ"
ಜಪಿಸುವ ಸರಳ ವಿಧಾನ:
ಮಂತ್ರ: ಓಂ ಕ್ರೀಂ ಕಾಳಿಕಾಯೈ ನಮಃ (ಅಥವಾ ಕೇವಲ "ಕ್ರೀಂ" ಎಂದು ಮನಸ್ಸಿನಲ್ಲಿ ಜಪಿಸಬಹುದು).
ದಿನ: ಮಂಗಳವಾರ, ಶುಕ್ರವಾರ ಅಥವಾ ಅಮಾವಾಸ್ಯೆಯ ದಿನ ಅತ್ಯಂತ ಫಲದಾಯಕ.
ವಿಧಾನ:
ಸ್ನಾನದ ನಂತರ ಕೆಂಪು ಅಥವಾ ಕಪ್ಪು ಬಟ್ಟೆಯನ್ನು ಧರಿಸಿ ದೇವಿಯ ಮುಂದೆ ದೀಪ ಹಚ್ಚಿ.
ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳೊಂದಿಗೆ, ಶತ್ರು ಬಾಧೆ, ಭಯ ಹಾಗೂ ನಕಾರಾತ್ಮಕ ಶಕ್ತಿಗಳ ನಿವಾರಣೆಗೆ ಪ್ರಾರ್ಥಿಸುತ್ತಾ 108 ಬಾರಿ ಜಪಿಸಿ.
ಮಹತ್ವ ಹಾಗೂ ಫಲ:
ನಕಾರಾತ್ಮಕ ಶಕ್ತಿ ನಿವಾರಣೆ: ನರಸೃಷ್ಟಿ, ದೃಷ್ಟಿದೋಷ ಹಾಗೂ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ.
ಮಾನಸಿಕ ಧೈರ್ಯ: ಮನಸ್ಸಿನಲ್ಲಿರುವ ಅಂಜಿಕೆ, ಭಯ ಮತ್ತು ಆತಂಕವನ್ನು ದೂರ ಮಾಡಿ ಧೈರ್ಯವನ್ನು ತುಂಬುತ್ತದೆ.
ಕಾರ್ಯ ಸಿದ್ಧಿ: ಕೆಲಸ ಕಾರ್ಯಗಳಲ್ಲಿ ಎದುರಾಗುವ ಕಠಿಣ ಅಡೆತಡೆಗಳನ್ನು ತಕ್ಷಣವೇ ನಿವಾರಿಸುತ್ತದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ