ಇಂದು ಶನಿವಾರವಾಗಿದ್ದು ಶನಿದೋಷ ನಿವಾರಣೆಗೆ ಶನಿ ದೇವನ ಪೂಜೆ, ಮಂತ್ರ ಪಠಣ ಮಾಡುವುದು ಉತ್ತಮ. ಅದರಲ್ಲೂ ವಿಶೇಷವಾಗಿ ಇಂದು ಶನಿ ಸಪ್ತನಾಮಾವಳಿ ಯಾವುದು ಮತ್ತು ಅದನ್ನು ಓದುವುದರ ಫಲವೇನು ತಿಳಿದುಕೊಳ್ಳಿ.
ಸಾಡೇ ಸಾತಿ ಶನಿ ದೋಷವಿರುವವರು ಜೀವನದಲ್ಲಿ ನಾನಾ ಕಷ್ಟಗಳನ್ನು ಎದುರಿಸುತ್ತಾರೆ. ಆರ್ಥಿಕವಾಗಿ ವೈಯಕ್ತಿಕವಾಗಿ, ಆರೋಗ್ಯಕ್ಕೆ ಸಂಬಂಧಿಸಿದಂತೆ, ಮಕ್ಕಳ ವಿಚಾರದಲ್ಲಿ ಈ ರೀತಿ ನಾನಾ ರೀತಿಯ ಕಷ್ಟಗಳು ಎದುರಾಗುತ್ತವೆ. ಹೀಗಾಗಿ ಶನಿ ದೋಷದಿಂದ ತಕ್ಕ ಮಟ್ಟಿಗೆ ಮುಕ್ತಿ ಪಡೆಯಬೇಕು ಎಂದರೆ ಶನಿ ಸಪ್ತನಾಮಾಳಿಯನ್ನು ಓದಬೇಕು.
ಶನಿ ಕರ್ಮ ಫಲಕಾರಕ. ನಾವು ಮಾಡಿದ ಕರ್ಮಗಳಿಗೆ ಅನುಸಾರವಾಗಿ ಅವನು ಫಲಗಳನ್ನು ನೀಡುತ್ತಾನೆ. ಹೀಗಾಗಿ ಶನಿದೋಷದಿಂದ ಸಂಪೂರ್ನವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಆದರೆ ಶನಿಯ ವಕ್ರ ದೃಷ್ಟಿಯಿಂದ ಆಗುವ ಬಾಧೆಗಳನ್ನು ನಿವಾರಿಸಲು ಶನಿ ಸಪ್ತನಾಮಾವಳಿಯನ್ನು ದಿನಕ್ಕೆ 70 ಬಾರಿ 70 ದಿನಗಳವರೆಗೆ ಪಠಿಸುತ್ತಾ ಬರಬೇಕು. ಶನಿ ಸಪ್ತನಾಮಾವಳಿ ಇಲ್ಲಿದೆ ನೋಡಿ.