ಇಂದು ಶನಿವಾರವಾಗಿದ್ದು ಶನಿದೇವರಿಗೆ ವಿಶೇಷವಾದ ದಿನವಾಗಿದೆ. ಶನಿ ದೇವನಿಗೆ ಪೂಜೆ ಮಾಡಲು ಅಥವಾ ಅವನ ಮಂತ್ರಗಳನ್ನು ಜಪಿಸಲು ಸೂಕ್ತ ಸಮಯ ಯಾವುದು? ಇಲ್ಲಿದೆ ನೋಡಿ ವಿವರ.
ಶನಿವಾರದಂದು ಶನಿ ಪೂಜೆ, ಶನಿ ಮಂತ್ರಗಳನ್ನು ಪಠಿಸುವುದರಿಂದ ಶನಿ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಸಾಡೇ ಸಾತಿ ಶನಿ ದೋಷದಿಂದ ಬಳಲುತ್ತಿರುವವರು ಜೀವನದಲ್ಲಿ ಸಾಕಷ್ಟು ಕಷ್ಟಗಳ ಸರಮಾಲೆಯನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಇಂದು ಶನಿ ಮಂತ್ರವನ್ನು ಜಪಿಸುವುದು ಉತ್ತಮ.
ಶನಿ ಮಂತ್ರವನ್ನು ಜಪಿಸಲು ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಮತ್ತು ಸಾಯಂಕಾಲ ಸೂರ್ಯಾಸ್ತದ ನಂತರ ಪ್ರಶಸ್ತವಾದ ಸಮಯವಾಗಿದೆ. ಕಡು ನೀಲಿ ಅಥವಾ ಕಪ್ಪು ಬಟ್ಟೆ ಶನಿ ದೇವನಿಗೆ ಪ್ರಿಯವಾದ ಬಣ್ಣವಾಗಿದೆ. ಹೀಗಾಗಿ ಈ ಬಣ್ಣದ ಬಟ್ಟೆ ಧರಿಸಿ ಮಂತ್ರ ಜಪಿಸಿ.
ಶನಿ ಮಂತ್ರವನ್ನು ಜಪಿಸುವಾಗ ಶನಿ ದೇವನ ಫೋಟೋ ಇಲ್ಲವೇ ಹನುಮಂತನ ವಿಗ್ರಹದ ಮುಂದೆ ಕುಳಿತು ಭಕ್ತಿಯಿಂದ 108 ಬಾರಿ ಜಪಿಸುವುದರಿಂದ ಶನಿ ದೇವನು ಸಂತೃಪ್ತನಾಗುತ್ತಾನೆ ಎಂಬ ನಂಬಿಕೆಯಿದೆ. ಶನಿಯ ಯಾವುದೇ ಮಂತ್ರ ಜಪಿಸುವುದಿದ್ದರೂ ಭಕ್ತಿ, ನಿರ್ಮಲ ಮನಸ್ಸು ಮತ್ತು ಏಕಾಗ್ರತೆಯಿಂದ ಜಪಿಸುವುದು ಮುಖ್ಯವಾಗಿರುತ್ತದೆ.