Publish Date: Mon, 26 Oct 2020 (07:36 IST)
Updated Date: Mon, 26 Oct 2020 (07:37 IST)
ಬೆಂಗಳೂರು : ಶನಿ ಸ್ಥಾನ ಬದಲಾದ ಹಿನ್ನಲೆಯಲ್ಲಿ ಇದರಿಂದ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಅದೇರೀತಿ ಈ ವರ್ಷದಲ್ಲಾಗುವ ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಮಿಥುನರಾಶಿಯಲ್ಲಿ ಜನಿಸಿದವರಿಗೆ ಸಾಧಕ ಹಾಗೂ ಬಾಧಕವೆರಡು ಇರುತ್ತದೆ. ಆದರೆ ಹನುಮಂತ ಸ್ವಾಮಿಯ ಅನುಗ್ರಹದಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಪ್ರತಿ ತಿಂಗಳು ಹನುಮಂತ ಸ್ವಾಮಿಗೆ ಅವಲಕ್ಕಿ, ಬೆಣ್ಣೆ ಅರ್ಪಿಸಿ ಮತ್ತು ವೀಳ್ಯದೆಲೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ.
ಹಾಗೇ ಪ್ರತಿ ತಿಂಗಳು ಅಯ್ಯಪ್ಪ ಸ್ವಾಮಿಗೆ ತುಪ್ಪವನ್ನು ಅರ್ಪಿಸಬೇಕು. ಹಾಗೇ ಪ್ರತಿ ತಿಂಗಳು ನಾಗ ದೇವಸ್ಥಾನಕ್ಕೆ ಹೋಗಿ ಹಾಲು ಮತ್ತು ಅರಶಿನ ಅರ್ಪಿಸಿದರೆ ಒಳ್ಳೆದಾಗುತ್ತದೆ.