Webdunia - Bharat's app for daily news and videos

Install App

ಶನಿವಾರ ಈ ಕೆಲಸಗಳನ್ನು ಮಾಡುವುದರಿಂದ ಶನಿ ದೋಷ ಬರಬಹುದು

Krishnaveni K
ಶನಿವಾರ, 10 ಆಗಸ್ಟ್ 2024 (08:44 IST)
ಬೆಂಗಳೂರು: ಇಂದು ಶನಿವಾರವಾಗಿದ್ದು, ಶನಿ ದೇವನಿಗೆ ಅರ್ಪಿತವಾದ ವಾರವಾಗಿದೆ. ಸಾಮಾನ್ಯವಾಗಿ ಈ ದಿನ ಶುಭ ಕೆಲಸಗಳನ್ನು ಮಾಡುವುದಿಲ್ಲ. ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ದೋಷ ಎದುರಿಸಬೇಕಾದೀತು ಎನ್ನಲಾಗುತ್ತದೆ. ಅಂತಹ ಕೆಲಸಗಳು ಯಾವುವು ನೋಡೋಣ.

ಶನಿವಾರ ಮದುವೆ, ಮುಂಜಿ, ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮವಾದ ದಿನವಲ್ಲ. ಆದರೆ ಅಪರಕ್ರಿಯೆಗಳನ್ನು ಮಾಡುವುದಕ್ಕೆ ಸಮಸ್ಯೆಯಿಲ್ಲ. ಅದೇ ರೀತಿ ಶುಭ ವಸ್ತುಗಳು, ಮಂಗಲ ವಸ್ತುಗಳನ್ನು ಖರೀದಿಸಲೂ ಇಂದಿನ ದಿನ ಶುಭ ದಿನವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬೇಡಿ. ಅದೇ ರೀತಿ ಛತ್ರಿ, ಉದ್ದಿನ ಬೇಳೆ ಮುಂತಾದ ವಸ್ತುಗಳನ್ನು ಮನೆಗೆ ತಂದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾದೀತು.

ಇಂದು ಶನಿಯ ವಕ್ರದೃಷ್ಟಿಯಿಂದ ಪಾರಾಗಬೇಕು ಎಂದರೆ ಶನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ ಅರಳಿ ಮರದ ಬುಡದಲ್ಲಿಡಿ. ಶನಿಯ ಅವಕೃಪೆಗೊಳಗಾಗಿದ್ದರೆ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದಲೂ ದೋಷಗಳು ನಿವಾರಣೆಯಾಗುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯನಿಗೆ ಇದನ್ನು ಅರ್ಪಿಸಿದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಮುಂದಿನ ಸುದ್ದಿ
Show comments