Publish Date: Thu, 25 Jun 2026 (08:34 IST)
Updated Date: Thu, 25 Jun 2026 (08:39 IST)
ವಿಷ್ಣು ಸಹಸ್ರನಾಮ ಪಠಿಸುವಾಗ ಅದರ ಪೂರ್ಣ ಫಲ ಸಿಗಬೇಕಾದರೆ ಅದನ್ನು ಶಾಸ್ತ್ರೋಕ್ತವಾಗಿ, ಸರಿಯಾದ ವಿಧಾನದಲ್ಲಿ ಜಪಿಸುವುದು ಅತ್ಯಗತ್ಯ. ಆ ಸರಿಯಾದ ಕ್ರಮಗಳು ಇಲ್ಲಿವೆ.
ವಿಷ್ಣು ಸಹಸ್ರನಾಮ ಪಠಣಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ ಎಂದರೆ ಬ್ರಹ್ಮ ಮುಹೂರ್ತ ಅಥವಾ ಮುಂಜಾನೆ (ಬೆಳಿಗ್ಗೆ 4:00 ರಿಂದ 6:00 ರವರೆಗೆ). ಈ ಸಮಯದಲ್ಲಿ ಮನಸ್ಸು ಮತ್ತು ವಾತಾವರಣ ಎರಡೂ ಪ್ರಶಾಂತವಾಗಿರುವುದರಿಂದ ಮಂತ್ರದ ಧ್ವನಿ ತರಂಗಗಳು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ಮುಂಜಾನೆ ಸಾಧ್ಯವಾಗದಿದ್ದರೆ, ಸೂರ್ಯಾಸ್ತದ ಸಮಯದಲ್ಲೂ (ಸಂಜೆ) ಪಠಿಸಬಹುದು.
ಶುದ್ಧತೆ ಮತ್ತು ಆಸನ
ದೈಹಿಕ ಶುದ್ಧತೆ: ಪಠಣ ಮಾಡುವ ಮುನ್ನ ಸ್ನಾನ ಮಾಡಿ, ಸ್ವಚ್ಛವಾದ ಉಡುಪನ್ನು ಧರಿಸಬೇಕು.
ಆಸನ: ಬರಿ ನೆಲದ ಮೇಲೆ ಕುಳಿತು ಎಂದಿಗೂ ಪಠಿಸಬಾರದು. ದರ್ಭೆಯ ಆಸನ, ಉಣ್ಣೆಯ ಆಸನ ಅಥವಾ ಸ್ವಚ್ಛವಾದ ಮಣೆಯ ಮೇಲೆ ಕುಳಿತುಕೊಳ್ಳಬೇಕು.
ದಿಕ್ಕು: ಪಠಿಸುವಾಗ ನಿಮ್ಮ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿರಲಿ. ಭಗವಾನ್ ವಿಷ್ಣುವಿನ ವಿಗ್ರಹ ಅಥವಾ ಫೋಟೋದ ಮುಂದೆ ತುಪ್ಪದ ದೀಪ ಮತ್ತು ಧೂಪವನ್ನು ಹಚ್ಚಿಟ್ಟು ಪೂಜಿಸಬೇಕು.
3. ಉಚ್ಚಾರಣೆ ಮತ್ತು ವೇಗ
ಸ್ಪಷ್ಟ ಉಚ್ಚಾರಣೆ: ಸಂಸ್ಕೃತ ಶ್ಲೋಕಗಳ ಉಚ್ಚಾರಣೆ ಅತ್ಯಂತ ಸ್ಪಷ್ಟವಾಗಿರಬೇಕು. ತಪ್ಪು ಉಚ್ಚಾರಣೆಯು ಮಂತ್ರದ ಶಕ್ತಿಯನ್ನು ಕಡಿಮೆ ಮಾಡಬಹುದು. ಆರಂಭದಲ್ಲಿ ಕಷ್ಟವಾದರೆ, ಆಡಿಯೋ ಕೇಳುತ್ತಾ ಪುಸ್ತಕ ನೋಡಿ ಓದುವುದನ್ನು ಅಭ್ಯಾಸ ಮಾಡಿ.
ಲಯಬದ್ಧತೆ: ಸ್ತೋತ್ರವನ್ನು ಅತಿಯಾದ ವೇಗದಲ್ಲಾಗಲಿ ಅಥವಾ ತುಂಬಾ ನಿಧಾನವಾಗಿಯಾಗಲಿ ಪಠಿಸಬಾರದು. ಮಧ್ಯಮ ವೇಗದಲ್ಲಿ, ಲಯಬದ್ಧವಾಗಿ ಮಂತ್ರಗಳ ಧ್ವನಿ ನಿಮ್ಮ ಕಿವಿಗೇ ಕೇಳಿಸುವಂತೆ ಪಠಿಸಬೇಕು.
4. ಸಂಕಲ್ಪ ಮತ್ತು ಧಾನ್ಯ
ಪಠಣವನ್ನು ಆರಂಭಿಸುವ ಮುನ್ನ ಕೈಯಲ್ಲಿ ಸ್ವಲ್ಪ ನೀರು ಅಥವಾ ಅಕ್ಷತೆಯನ್ನು ಹಿಡಿದು, ನಿಮ್ಮ ಇಷ್ಟಾರ್ಥಗಳನ್ನು ಮನಸ್ಸಿನಲ್ಲಿ ಸ್ಮರಿಸಿ ಭಗವಂತನಿಗೆ 'ಸಂಕಲ್ಪ' ಮಾಡಬೇಕು. ಪಠಿಸುವಾಗ ಮೊಬೈಲ್ ನೋಡುವುದು, ಮಧ್ಯದಲ್ಲಿ ಎದ್ದು ಹೋಗುವುದು ಅಥವಾ ಇತರರೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮನಸ್ಸು ಸಂಪೂರ್ಣವಾಗಿ ವಿಷ್ಣುವಿನ ಪಾದಗಳ ಮೇಲಿರಬೇಕು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ