Select Your Language

Notifications

webdunia
webdunia
webdunia
webdunia

ವ್ಯಾಪಾರದಲ್ಲಿ ಪ್ರಗತಿ ಕಾಣಲು ಲಕ್ಷ್ಮೀ ಗಣಪತಿ ಪೋಟೊದ ಮುಂದೆ ಈ ವಸ್ತಗಳನ್ನು ಇಟ್ಟು ಪೂಜೆ ಮಾಡಿ

ವ್ಯಾಪಾರದಲ್ಲಿ ಪ್ರಗತಿ ಕಾಣಲು  ಲಕ್ಷ್ಮೀ ಗಣಪತಿ ಪೋಟೊದ ಮುಂದೆ ಈ ವಸ್ತಗಳನ್ನು ಇಟ್ಟು ಪೂಜೆ ಮಾಡಿ
ಬೆಂಗಳೂರು , ಶನಿವಾರ, 21 ಡಿಸೆಂಬರ್ 2019 (06:15 IST)
ಬೆಂಗಳೂರು : ಜನರು ತಾವು ಮಾಡುವ ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಬೇಕೆಂದು ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ಲಕ್ಷ್ಮೀ ಗಣಪತಿಯ ಪೋಟೊದ ಮುಂದೆ ಈ ವಸ್ತಗಳನ್ನು ಇಟ್ಟು ಪೂಜೆ ಮಾಡಿದರೆ ನೀವು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ಕಾಣಬಹುದು.



ಮಂಗಳವಾರದ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನವನ್ನಾಚರಿಸಿ ಮನೆಯನ್ನು ಸ್ವಚ್ಚಗೊಳಿಸಿಕೊಳ್ಳಬೇಕು. ಮೊದಲಿಗೆ ಗಣೇಶ್, ಲಕ್ಷ್ಮೀದೇವಿಯನ್ನು ಪೂಜಿಸಿದ ನಂತರ 5 ಅರಶಿನ ಕೊಂಬು, 5 ಕರ್ಪೂರದ ಬಿಲ್ಲೆ , 2 ಏಲಕ್ಕಿ, 2 ಲವಂಗ, ಒಂದು ರೂಪಾಯಿ ನಾಣ್ಯ, 2 ಗೋಮತಿ ಚಕ್ರ, 1 ಕವಡೆ ನ್ನು ತೆಗೆದುಕೊಳ್ಳಬೇಕು.


ಅರಶಿನದ ಕೊಂಬಿಗೆ ಕುಂಕುಮವನ್ನಿಟ್ಟು ಈ ಎಲ್ಲಾ ವಸ್ತುಗಳನ್ನು ಲಕ್ಷ್ಮೀಗಣಪತಿಯ ಮುಂದಿಟ್ಟು ದೀಪ, ಧೂಪ, ನೈವೇದ್ಯವನ್ನು ಸಮರ್ಪಿಸಬೇಕು. ಬಳಿಕ ಮನಸ್ಸಿನ ಕೋರಿಕೆಗಳನ್ನು ಹೇಳಿಕೊಂಡು ಅವುಗಳನ್ನು ಕೆಂಪುಬಟ್ಟೆಯಲ್ಲಿ ಕಟ್ಟಿ ಯಾರಿಗೂ ಕಾಣದಂತೆ ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದನ್ನು ಒಂದು ವರ್ಷಗಳ ಕಾಲ ಇಟ್ಟು ಬಳಿಕ ಹರಿಯುವ ನದಿಗೆ ಹಾಕಿ ಮತ್ತೆ ಇದೇ ರೀತಿ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ