Select Your Language

Notifications

webdunia
webdunia
webdunia
webdunia

ಚರ್ಮರೋಗದಿಂದ ಬಳಲುತ್ತಿರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ

ಚರ್ಮರೋಗದಿಂದ ಬಳಲುತ್ತಿರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ
ಬೆಂಗಳೂರು , ಶನಿವಾರ, 1 ಜೂನ್ 2019 (06:49 IST)
ಬೆಂಗಳೂರು : ಚರ್ಮದ ರೋಗದಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗದೆ ಹೋದಲ್ಲಿ ಅಂತವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.



ಮಂಡ್ಯದಿಂದ 23 ಕಿ.ಮೀ ಹಾಗೂ ಮದ್ದೂರಿನಿಂದ 3 ಕಿ.ಮೀ ದೂರದಲ್ಲಿರುವ 2000 ವರ್ಷಗಳ ಇತಿಹಾಸವಿರುವ ವೈದ್ಯನಾಥೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದರೆ ಎಂತಹ ಗುಣಮುಖವಾಗದ ಚರ್ಮರೋಗವಿದ್ದರೂ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

 

ಹಿಂದೆ ಈ ಪ್ರದೇಶವನ್ನು ಅಳುತ್ತಿದ್ದ ರಾಜನಿಗೆ ಸೇರಿದ ಗೋಶಾಲೆಯಲ್ಲಿನ ಹಸುವೊಂದು ಹಾಲು ಕೊಡುತ್ತಿರಲಿಲ್ಲ.ಇದಕ್ಕೆ ಕಾರಣ ಹಸು ಒಂದು ಹುತ್ತದ ಮೇಲೆ ಬಳಿ ನಿಂತು ಹಾಲು ನೀಡಿ ಬರುತ್ತಿತ್ತು. ಇದನ್ನು ತಿಳಿದ ರಾಜ ಹುತ್ತವನ್ನು ಒಡೆದು ಹಾಕುವಂತೆ ತನ್ನ ಸೈನಿಕರಿಗೆ ತಿಳಿಸಿದ. ಹುತ್ತ ಒಡೆದಾಗ ಗುದ್ದಲಿಯ ಪೆಟ್ಟು ತಗುಲಿ ಒಳಗಿದ್ದ ಶಿವನ ಹಣೆಗೆ ಗಾಯವಾಗಿ ರಕ್ತ ಸೋರಲು ಆರಂಭವಾಯಿತು.ಆಗ ಪುರೋಹಿತರ ಸಲಹೆಯಂತೆ ವಿಷಾಪಹಾರಿ ಸೊಪ್ಪನ್ನು ತಂದು ಶಿವನ ಹಣೆಗೆ ಹಚ್ಚಿದ ನಂತರ ರಕ್ತ ನಿಂತಿತು. ನಂತರ ಶಿವ ವೈದ್ಯನಾಥನಾಗಿ ಅಲ್ಲೇ ಸ್ಥಿರವಾಗಿ ನೆಲೆ ನಿಂತ ಎನ್ನಲಾಗಿದೆ

 

ಈ ದೇವಲಾಯದ ಬಳಿ ಇರುವ ಶಿಂಷಾ ನದಿಯಲ್ಲಿ ಮಿಂದು ಬೆಲ್ಲ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ನದಿಗೆ ಸಮರ್ಪಿಸಿ ಬಳಿಕ ದೇವರ ದರ್ಶನ ಪಡೆದು ಗರ್ಭ ಗುಡಿಯಲ್ಲಿರುವ ಹುತ್ತದ ಮಣ್ಣನ್ನು ತೆಗೆದುಕೊಂಡು ಬಂದು ಈ ಹುತ್ತದ ಮಣ್ಣನ್ನು ರೋಗದ ಭಾಗಕ್ಕೆ ಲೇಪಿಸಿಕೊಂಡರೆ ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?