ಇಂದು ನವರಾತ್ರಿಯ 5 ನೇ ದಿನವಾಗಿದ್ದು ಸ್ಕಂದ ಮಾತಾ ದೇವಿಯ ಆರಾಧನೆ ಮಾಡಲಾಗುತ್ತದೆ. ಇಂದು ಸ್ಕಂದ ಮಾತಾದೇವಿಯ ಈ ಮಂತ್ರವನ್ನು ಹೇಳಿ ಪೂಜೆ ಮಾಡಿದರೆ ಒಳಿತಾಗುತ್ತದೆ.
ಸ್ಕಂದ ಮಾತಾ ದೇವಿಗೆ ಪೂಜೆ ಮಾಡುವಾಗ ವಿಶೇಷವಾಗಿ ಕೆಂಪು ಬಣ್ಣದ ಗುಲಾಬಿ ಹೂವುಗಳಿಂದ ಅಲಂಕರಿಸಬೇಕು. ಇದು ದೇವಿಗೆ ಅತ್ಯಂತ ಪ್ರಿಯವಾದ ಹೂವಾಗಿದೆ. ಜೀವನದಲ್ಲಿ ಸದ್ಗತಿಗೆ ಮತ್ತು ಸಂತುಷ್ಟಿಗಾಗಿ ಸ್ಕಂದಮಾತಾ ದೇವಿಯನ್ನು ಪೂಜೆ ಮಾಡಬೇಕು.
ಶುದ್ಧ ಮನಸ್ಸಿನಿಂದ ದೇವಿಯನ್ನು ಆರಾಧಿಸಿದರೆ ಅವರಿಗೆ ಸಂಪತ್ತು, ಮನಸ್ಸಿನ ನೆಮ್ಮದಿ, ಸಮೃದ್ಧಿಯನ್ನು ದೇವಿ ಕರುಣಿಸುತ್ತಾಳೆ. ಬುಧ ಗ್ರಹನ ದೋಷಗಳಿದ್ದರೆ ಸ್ಕಂದ ಮಾತಾ ದೇವಿಯ ಪೂಜೆಯಿಂದ ದೋಷ ನಿವಾರಣೆಯಾಗುವುದು. ಸ್ಕಂದ ಮಾತಾ ದೇವಿಯನ್ನು ಪೂಜೆ ಮಾಡುವಾಗ ತಪ್ಪದೇ ಈ ಮಂತ್ರವನ್ನು ಹೇಳಿ.
ಓಂ ದೇವಿ ಸ್ಕಂದಮಾತಾಯ ನಮಃ
ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ
ಶುಭದಾಸ್ತು ಸದಾದೇವಿ ಸ್ಕಂದ ಮಾತಾ ಯಶಸ್ವಿನಿ