Webdunia - Bharat's app for daily news and videos

Install App

ಮಾರ್ಗಶೀರ್ಷ ಮಾಸದಲ್ಲಿ ಈ ಮಂತ್ರದೊಂದಿಗೆ ಶಂಖ ಪೂಜೆ ಮಾಡಿ

Krishnaveni K
ಬುಧವಾರ, 11 ಡಿಸೆಂಬರ್ 2024 (08:43 IST)
ಬೆಂಗಳೂರು: ಮಾರ್ಗಶೀರ್ಷ ಮಾಸ ಆರಂಭವಾಗಿದ್ದು ಈ ಮಾಸ ಹಿಂದೂಗಳ ಪಾಲಿಗೆ ಅತ್ಯಂತ ಪೂಜನೀಯ ಮಾಸವಾಗಿದೆ. ಈ ಮಾಸದಲ್ಲಿ ಯಾವ ದೇವರ ಪೂಜೆ ಮಾಡಬೇಕು ನೋಡಿ.

ಮಾರ್ಗಶೀರ್ಷ ಮಾಸವನ್ನು ಭಗವಾನ್ ಮಹಾವಿಷ್ಣು ಮತ್ತು ಶ್ರೀಕೃಷ್ಣನ ಪೂಜೆಗೆ ಅತ್ಯಂತ ಶ್ರೇಷ್ಠವಾದ ಮಾಸವೆಂದು ಪರಿಗಣಿಸಲಾಗುತ್ತದೆ. ಇದೇ ಮಾಸದಲ್ಲಿ ವೈಕುಂಠ ಏಕಾದಶಿಯಿರುತ್ತದೆ. ಈ ಮಾಸದಲ್ಲಿ ಭಜನೆ, ಕೀರ್ತನೆಗಳ ಮೂಲಕ ದೇವರ ಆರಾಧನೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಈ ಮಾಸದಲ್ಲಿ ಮಹಾವಿಷ್ಣುವಿಗೆ ವಿಶೇಷವಾದ ಶಂಖವನ್ನು ಪೂಜೆ ಮಾಡಬೇಕು. ಶಂಖಕ್ಕೆ ಪೂಜೆ ಮಾಡಿದರೆ ಸಾಕ್ಷತಾ ಮಹಾವಿಷ್ಣುವಿನ ಪಾಂಚಜನ್ಯಕ್ಕೆ ಪೂಜೆ ಮಾಡಿದಷ್ಟೇ ಶ್ರೇಷ್ಠವಾಗಿರುತ್ತದೆ. ವಿಶೇಷವಾಗಿ ಶಂಖವನ್ನು ಪೂಜೆ ಮಾಡುವಾಗ ಈ ಮಂತ್ರವನ್ನು ಹೇಳಿ ಪೂಜೆ ಮಾಡಿ. ಅದು ಹೀಗಿದೆ:

ತ್ವಂ ಪುರಾ ಸಾಗರೋತ್ಪನ್ನ ವಿಷ್ಣುನಾ ವಿದ್ರತಃ ಕರೇ
ನಿರ್ಮಿತಃ ಸರ್ವದೇವೈಶ್ಚ ಪಾಂಚಜನ್ಯ ನಮೋಸ್ತುತೇ
ತವ ನಾದೇನ ಜೀಮೂತ ವಿತ್ರಸಂತಿ ಸುರಾಸುರಃ
ಶಶಾಂಕಯುತದೀಪ್ತಾಭ ಪಾಂಚಜನ್ಯ ನಮೋಸ್ತುತೇ

ಶಂಖವನ್ನು ಲಕ್ಷ್ಮಿಯ ಸಂಕೇತ ಎಂದು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಶಂಖಕ್ಕೆ ಪೂಜೆ ಮಾಡಿ ಅದರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಸಾಕ್ಷಾತ್ ಲಕ್ಷ್ಮೀ ದೇವಿ ಪ್ರಸನನ್ನಳಾಗಿ ಮನೆಯಲ್ಲಿ ಧನ-ಕನಕಾದಿಗಳು ವೃದ್ಧಿಯಾಗುವಂತೆ ಆಶೀರ್ವದಿಸುತ್ತಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಮುಂದಿನ ಸುದ್ದಿ
Show comments