Publish Date: Tue, 12 Nov 2024 (08:40 IST)
Updated Date: Tue, 12 Nov 2024 (08:42 IST)
ಬೆಂಗಳೂರು: ಜೀವನದಲ್ಲಿ ನಾವು ಏನೇ ಸಾಧನೆ ಮಾಡಬೇಕಾದರೂ ಭಗವಂತನ ಅನುಗ್ರಹ ತುಂಬಾ ಮುಖ್ಯ. ಜೀವನದಲ್ಲಿ ದೈವಿಕ ಕೃಪೆಯನ್ನು ಗಳಿಸಿ ಯಶಸ್ಸು ಪಡೆಯಲು ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು.
ಶಕ್ತಿ, ಧೈರ್ಯ, ಶಾಂತಿ, ಸಮೃದ್ಧಿ ಇವೆಲ್ಲವನ್ನೂ ಗಳಿಸಬೇಕೆಂದರೆ ಪ್ರತಿನಿತ್ಯ ಇಷ್ಟ ಸಿದ್ಧಿ ಮಂತ್ರ ಪಠಿಸಬೇಕು. ಇದನ್ನು ಪಠಿಸುವುದರಿಂದ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಮನೋಸ್ಥೈರ್ಯ ಹೆಚ್ಚುವುದಲ್ಲದೆ ಆತ್ಮವಿಶ್ವಾಸವೂ ವೃದ್ಧಿಸುವುದು.
ಓಂ ಐಂ ಹ್ರೀಂ ಶ್ರೀಂ ಕ್ಲೀಂ ಸೌಃ ಇಷ್ಟಾರ್ಥ ಸಿದ್ಧಿಂ ಕುರು ಕುರು ಸ್ವಾಹಾ
ಈ ಮಂತ್ರವನ್ನು ಏಕಾಗ್ರತೆಯಿಂದ ಪಠಿಸಿದರೆ ಆರ್ಥಿಕ ಸಮೃದ್ಧಿ, ಮನಸ್ಸಿನ ನೆಮ್ಮದಿ ವೃದ್ಧಿಯಾಗುತ್ತದೆ. ಜೊತೆಗೆ ತೊಂದರೆಗಳಿಂದ ನಮ್ಮನ್ನು ದೂರ ಮಾಡುತ್ತದೆ. ಪ್ರತಿ ದಿನ ಸ್ನಾನ ಮಾಡಿ ಬೆಳಗಿನ ಜಾವ ಅಥವಾ ಸಂಜೆ ವೇಳೆ ಏಕಾಗ್ರತೆಯಿಂದ ಕುಳಿತು ಈ ಮಂತ್ರವನ್ನು 108 ಬಾರಿ ಜಪಿಸಿ.
ಇದರಿಂದ ನಿಮ್ಮ ಶರೀರ ಮತ್ತು ಮನಸ್ಸು ಎರಡೂ ಶುದ್ಧಿಯಾಗುತ್ತದೆ. ಪ್ರಾರ್ಥನೆ ಮಾಡುವಾಗ ಜಪಮಾಲೆ ಹಿಡಿದು ಜಪ ಮಾಡಿದರೆ ಇನ್ನೂ ಶ್ರೇಷ್ಠ. ಮಂತ್ರ ಉಚ್ಚಾರ ಸ್ಪಷ್ಟವಾಗಿರಬೇಕು. ಇದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.