Publish Date: Wed, 07 Aug 2019 (08:51 IST)
Updated Date: Wed, 07 Aug 2019 (08:55 IST)
ಬೆಂಗಳೂರು : ಬಹಳಷ್ಟು ಜನರಿಗೆ ಮೂಲಾ ನಕ್ಷತ್ರ ಅಶುಭ ನಕ್ಷತ್ರವೆಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಆದರೆ ಮೂಲ ನಕ್ಷತ್ರದವರು ಧನು ರಾಶಿಯಲ್ಲಿ ಹುಟ್ಟಿರುವುದರಿಂದ ತುಂಬಾ ಬಲಿಷ್ಠರಾಗಿರುತ್ತಾರೆ. ಮೂಲ ನಕ್ಷತ್ರದವರಿಗೆ ಸರ್ಪಗಳ ಅನುಗ್ರಹ ಬಹಳ ಚೆನ್ನಾಗಿರುತ್ತದೆ. ಸರ್ಪಗಳು ಮೂಲ ನಕ್ಷತ್ರದವರಿಗೆ ಯಾವುದೇ ಕೆಡುಕನ್ನು ಮಾಡುವುದಿಲ್ಲ. ಒಂದು ವೇಳೆ ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುತಿದ್ದರೆ ಈ ಪರಿಹಾರವನ್ನು ಮಾಡಿ.
5 ಮಂಗಳವಾರ ಅಥವಾ 5 ಶುಕ್ರವಾರ ಒಂದು ಚಿಕ್ಕ ಗಾತ್ರದ ತಾಮ್ರದಲ್ಲಿ ಮಾಡಿದ ಸರ್ಪದ ಮೂರ್ತಿಯನ್ನು ತೆಗೆದುಕೊಂಡು ಪ್ರಾತಃಕಾಲದಲ್ಲಿ ಸ್ನಾನಾದಿಗಳನ್ನು ಮಾಡಿ ದೇವರ ಪೂಜೆ ಮಾಡುವ ಮೊದಲು ದೇವರ ಕೋಣೆಯಲ್ಲಿ ಕೆಂಪು ವಸ್ತ್ರದಲ್ಲಿ ಮೇಲೆ ಈ ಸರ್ಪದ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಅದಕ್ಕೆ ಅರಶಿನ, ಕುಂಕುಮ, ಶ್ರೀಗಂಧ ಹಚ್ಚಿ ಪೂಜೆ ಮಾಡಿ.
ಹೀಗೆ 5 ಮಂಗಳವಾರ ಅಥವಾ ಶುಕ್ರವಾರ ಪೂಜೆ ಮಾಡಿದ ನಂತರ ಈ ಸರ್ಪದ ಮೂರ್ತಿಯ ಜೊತೆಗೆ ಆ ಕೆಂಪು ವಸ್ತ್ರವನ್ನು ಹತ್ತಿರದ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಮೊದಲು ದೇವರ ದರ್ಶನ ಮಾಡಿ ನಂತರ ಅದನ್ನು ಅಲ್ಲಿ ಹೋಮ ನಡೆಯುತ್ತಿದ್ದರೆ ಆ ಹೋಮಕ್ಕೆ ಅಥವಾ ದೇವರ ಹುಂಡಿಗೆ ಹಾಕಬೇಕು. ಹೀಗೆ ಮಾಡಿದರೆ ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುವುದಿಲ್ಲ.