Select Your Language

Notifications

webdunia
webdunia
webdunia
webdunia

ಏಕಾಗ್ರತೆಗೆ ತೊಂದರೆಯಾಗುತ್ತಿದೆಯೇ ಮಹಾವಿಷ್ಣುವಿನ ಈ ಮಂತ್ರ ಓದಿ

Astrology

Krishnaveni K

ಬೆಂಗಳೂರು , ಬುಧವಾರ, 15 ಜನವರಿ 2025 (08:42 IST)
ಬೆಂಗಳೂರು: ಓದುವಾಗ, ಕೆಲಸ ಮಾಡುವಾಗ ಏಕಾಗ್ರತೆಗೆ ತೊಂದರೆಯಾಗುತ್ತಿದೆಯೇ? ಹಾಗಿದ್ದರೆ ಮಹಾವಿಷ್ಣುವಿನ ಈ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಪಠಿಸಿ. ಇದರಿಂದ ಮಹಾವಿಷ್ಣುವಿನ ಅನುಗ್ರಹದ ಜೊತೆಗೆ ಏಕಾಗ್ರತೆ ಸಾಧಿಸಲು ಅನುಕೂಲವಾಗುತ್ತದೆ.

ವಿಶೇಷವಾಗಿ ವಿದ್ಯಾರ್ಥಿಗಳಿಗೆ ಓದಲು ಏಕಾಗ್ರತೆ ಸಿಗುವುದಿಲ್ಲ, ಓದುವುದು ತಲೆಗೆ ಹತ್ತುತ್ತಿಲ್ಲ ಎನ್ನುವ ಸಮಸ್ಯೆಯಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಮನಸ್ಸು ಚಂಚಲವಾಗಿರುವುದು. ಅನೇಕ ಕಡೆ ಮನಸ್ಸು ಓಡಾಡುತ್ತಿದ್ದರೆ ಪುಸ್ತಕದ ಕಡೆಗೆ ಧ್ಯಾನವಿರುವುದಿಲ್ಲ.

ಚಿಂತೆಗಳನ್ನು ಬಿಟ್ಟು ಮನಸ್ಸನ್ನು ಓದಿನ ಕಡೆಗೆ ಹಾಯಿಸಬೇಕಾದರೆ ಮನಸ್ಸು ಶಾಂತವಾಗಿರಬೇಕು. ಮನಸ್ಸು ಶಾಂತವಾಗಬೇಕೆಂದರೆ ಮಹಾವಿಷ್ಣುವಿನ ಈ ಮಂತ್ರವನ್ನು ಪದ್ಮಾಸನ ಹಾಕಿ ಕುಳಿತು ಏಕಚಿತ್ತದಿಂದ ಪಠಿಸಿ.

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ

ನೀನೇ ನನ್ನ ತಂದೆ, ತಾಯಿ, ನೀನೇ ನನ್ನ ಸರ್ವಸ್ವ, ನೀನೇ ನನ್ನ ಭರವಸೆ ಮತ್ತು ಗುರಿ ಎಂಬುದು ಈ ಮಂತ್ರದ ಅರ್ಥವಾಗಿದೆ. ವಿಶೇಷವಾಗಿ ಇದನ್ನು ಮುಂಜಾನೆ ಹೊತ್ತಿನಲ್ಲಿ ಪಠಿಸುವುದು ಉತ್ತಮ. ಮಹಾವಿಷ್ಣುವಿನ ಫೋಟೋ ಅಥವಾ ವಿಗ್ರಹದ ಮುಂದೆ ಶುದ್ಧ ಮನಸ್ಸಿನಿಂದ ಕೂತು 108 ಬಾರಿ ಈ ಮಂತ್ರವನ್ನು ಪಠಿಸುವುದರಿಂದ ಏಕಾಗ್ರತೆ ಸಿಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?