Select Your Language

Notifications

webdunia
webdunia
webdunia
webdunia

Maha Shivaratri 2025: ಇದೇ ಕಾರಣಕ್ಕೆ ಶಿವನಿಗೆ ಬಿಲ್ವಪತ್ರೆ ಸಮರ್ಪಿಸುವುದು

Maha Shivratri 2025,  Belpatra Imporatnce, Difference Between Shivratri and Mahashivratri,

Sampriya

ಬೆಂಗಳೂರು , ಸೋಮವಾರ, 24 ಫೆಬ್ರವರಿ 2025 (18:41 IST)
Photo Courtesy X
ಬೆಂಗಳೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಶಿವರಾತ್ರಿ ಇದೇ 26ರಂದು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಇಡೀ ದಿವಸ ಉಪವಾಸ,  ರಾತ್ರಿ ಜಾಗರಣೆ ಮಾಡಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.  ಶಿವರಾತ್ರಿ ಸಮಯದಲ್ಲಿ ಶಿವನಿಗೆ ಇಷ್ಟವಾಗಿರುವ ಸಕಲವನ್ನೂ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಶಿವ ಮೆಚ್ಚುವ ವಸ್ತುಗಳಲ್ಲಿ ಬಿಲ್ವಪತ್ರೆಯೂ ಒಂದು.

ಸಾಗರ ಮಥನದ ಸಮಯದಲ್ಲಿ ಹಾಲಾಹಲದ ವಿಷದಿಂದ ಇಡೀ ಜಗತ್ತು ಅದರ ಶಾಖವನ್ನು ಸಹಿಸಲಾರದೆ ತೊಂದರೆ ಅನುಭವಿಸುತ್ತಾರೆ.  ಇದರಿಂದ ದೇವತೆಗಳು ಮತ್ತು ರಾಕ್ಷಸರು ಕೂಡ ತೊಂದರೆಗೀಡಾದರು. ಆಗ ಎಲ್ಲರೂ ಶಿವನನ್ನು ಪೂಜಿಸಿ ಹಾಲಾಹಲದ ವಿಷವನ್ನು ಹೋಗಲಾಡಿಸಲು ಸಹಾಯ ಕೇಳಿದರು.

ಆಗ ಶಿವನು ಎಲ್ಲರನ್ನೂ ಅದರಿಂದ ಮುಕ್ತಗೊಳಿಸಲು ಆ ಹಾಲಾಹಲ ವಿಷವನ್ನು ಕುಡಿದನು. ವಿಷದ ತಾಪ ಎಷ್ಟಿತ್ತೆಂದರೆ ಮಹಾದೇವನ ಗಂಟಲು ನೀಲಿಯಾಯಿತು. ಆಗ ದೇವರುಗಳು ಮಹಾದೇವನಿಗೆ ಬಿಲ್ವಪತ್ರೆ ಮತ್ತು ನೀರನ್ನು ಅರ್ಪಿಸಿದರು. ಬಿಲ್ವಪತ್ರೆ ಪ್ರಭಾವದಿಂದ ವಿಷದ ಉಷ್ಣತೆಯು ಕಡಿಮೆಯಾಗತೊಡಗಿತು.

ಬಿಲ್ವಪತ್ರೆ ವಾಸ್ತವವಾಗಿ ತಾಪಮಾನವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ದೇವರುಗಳು ಬಿಲ್ವಪತ್ರೆಯನ್ನು ಅರ್ಪಿಸಿದ ನಂತರ ಶಿವನ ಜ್ವರವು ಕಡಿಮೆಯಾಯಿತು ಮತ್ತು ಅವನು ಸಂತೋಷಗೊಂಡನು. ಈ ವೇಳೆ ಶಿವ ಇನ್ನು ಮುಂದೆ ನನಗೆ ಬಿಲ್ವಪತ್ರೆಯನ್ನು ಅರ್ಪಿಸುವವರ ಪ್ರತಿಯೊಂದು ಆಸೆಯನ್ನು ನಾನು ಪೂರೈಸುತ್ತೇನೆ ಎಂದು ಎಲ್ಲರಿಗೂ ಆಶೀರ್ವದಿಸಿದನು. ಅಂದಿನಿಂದ, ಶಿವ ಅಥವಾ ಅವನ ಒಂದು ರೂಪವಾದ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವ ಸಂಪ್ರದಾಯವು ನಡೆದುಕೊಂಡು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?