Publish Date: Sat, 09 Dec 2017 (17:57 IST)
Updated Date: Sat, 09 Dec 2017 (18:04 IST)
ಬೆಂಗಳೂರು: ನವಿಲು ಎಂದಾಗ ಅದರ ಅಂದ ನಮ್ಮ ಕಣ್ಣ ಮುಂದೆ ಬರುತ್ತದೆ. ನವಿಲಿನ ಗರಿ ಕಂಡ ತಕ್ಷಣ ನಮ್ಮ ಮನಸೆಳೆಯುತ್ತದೆ.
ಈ ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಇದನಿಟ್ಟ ಸ್ಥಳದಲ್ಲಿ ಹಲ್ಲಿಗಳು ಇರುವುದಿಲ್ಲ. ಹಲ್ಲಿಗಳಿಗೆ ನವಿಲು ಎಂದರೆ ಭಯವಿದ್ದ ಕಾರಣ ಅದರ ಗರಿಗಳನ್ನು ಕಂಡಾಗ ಓಡಿಹೋಗುತ್ತದೆ. ಹಾಗೆ ಮನೆಯ ಒಳಗೆ ಕ್ರೀಮಿಕೀಟಗಳು ಬರದಂತೆ ತಡೆಯುತ್ತದೆ.
ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಲು ಇಡುವಂತ ವಸ್ತುಗಳಲ್ಲಿ ನವಿಲು ಗರಿಯು ಒಂದು. ಇದು ನಕರಾತ್ಮಕ ಶಕ್ತಿಗಳನ್ನು ತೊಲಗಿಸಿ ಸಕರಾತ್ಮಕ ಶಕ್ತಿಗಳನ್ನು ನೆಲೆಸುವಂತೆ ಮಾಡುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ವಾತವರಣ ಉಂಟುಮಾಡುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಇರುವುದಿಲ್ಲ. ಬೇಡ್ ರೊಂನಲ್ಲಿ ನವಿಲು ಗರಿ ಇಡುವುದರಿಂದ ತುಂಬಾ ಒಳ್ಳೆಯದು. ಯಾಕೆಂದರೆ ಬೆಳಿಗ್ಗೆ ಎದ್ದು ಅದನ್ನು ನೋಡುವುದರಿಂದ ರಾಹುಗ್ರಹ ದೋಷ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ