Select Your Language

Notifications

webdunia
webdunia
webdunia
webdunia

ಶಿವನಿಗೆ ಇಂದು ಇದೊಂದು ವಸ್ತು ಅರ್ಪಿಸಿದಲ್ಲಿ ನೀವು ಅಂದುಕೊಂಡ ಕೆಲಸವಾಗುತ್ತದೆ

Shiva
ಬೆಂಗಳೂರು: ಇಂದು ಸೋಮವಾರವಾಗಿದ್ದು ಶಿವನ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಇಂದು ನೀವು ಭಗವಾನ್ ಶಿವನ ಕೃಪೆಗೆ ಪಾತ್ರರಾಗಬೇಕಾದರೆ ಅವನಿಗೆ ಈ ಒಂದು ವಸ್ತುವಿನಿಂದ ಪೂಜೆ ಮಾಡಬೇಕು.

ಮಹಾವಿಷ್ಣುವಿನಂತೆ ಶಿವ ಅಲಂಕಾರ ಪ್ರಿಯನಲ್ಲ. ಹಾಗಿದ್ದರೂ ಶಿವನಿಗೂ ಕೆಲವು ಇಷ್ಟವಸ್ತುಗಳಿವೆ. ಇದನ್ನು ನೀಡಿದಲ್ಲಿ ಆತ ಸಂಪ್ರೀತನಾಗುತ್ತಾನೆ ಮತ್ತು ಭಕ್ತರ ಕೋರಕೆಯನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಹಾಗಾಗಿಯೇ ಇಂದು ತಪ್ಪದೇ ಶಿವನ ದೇವಾಲಯಕ್ಕೆ ತೆರಳಿ ಪೂಜೆ ಮಾಡಿ.

ಶಿವನಿಗೆ ಪೂಜೆ ಮಾಡುವಾಗ ಇಂದು ಭಕ್ತಿಯಿಂದ ಎಳೆ ನೀರಿನ ಅಭಿಷೇಕ, ಬಿಲ್ವ ಪತ್ರೆ ಅರ್ಪಿಸುವುದು ಸಾಮಾನ್ಯ. ಇದರ ಜೊತೆಗೆ ಕಾನನದ ಹೂವುಗಳಲ್ಲಿ ಒಂದಾದ ಎಕ್ಕದ ಹೂವನ್ನು ಅರ್ಪಿಸಿ ಇಂದು ಪೂಜೆ ಮಾಡಿ. ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ.

ಎಕ್ಕದ ಹೂ ಶಿವನಿಗೆ ವಿಶೇಷವಾಗಿದ್ದು ಇಂದು ಪೂಜೆಗೆ ಈ ಹೂವನ್ನು ಬಳಸಿ. ಅದರಲ್ಲೂ ಬಿಳಿ ಬಣ್ಣದ ಎಕ್ಕದ ಹೂ ವಿಶೇಷವಾದುದು ಆಗಿದೆ. ಇದರ ಜೊತೆಗೆ ತಪ್ಪದೇ ‘ಓಂ ನಮಃ ಶಿವಾಯ’ ಮಂತ್ರವನ್ನು 108 ಬಾರಿ ಹೇಳಲು ಮರೆಯಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಓದಲೇಬೇಕಾದ ಆಂಜನೇಯ ಸ್ವಾಮಿಯ ಮಂತ್ರ