Publish Date: Sat, 18 Jan 2020 (06:23 IST)
Updated Date: Sat, 18 Jan 2020 (06:25 IST)
ಬೆಂಗಳೂರು : ಎಲ್ಲರಿಗೂ ತಾವು ಐಶ್ವರ್ಯವಂತರಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ದೇವರಿಗೆ ಪೂಜೆ ಪುಸ್ಕಾರಗಳನ್ನು ಮಾಡುತ್ತಾರೆ. ಆದರೆ ದೇವರಿಗೆ ದೀಪ ಹಚ್ಚುವಾಗ ಈ ನಿಯಮವನ್ನು ಪಾಲಿಸಿದರೆ ನಿಮಗೆ ಐಶ್ವರ್ಯ ದೇವತೆ ಒಲಿಯುತ್ತಾಳೆ.
ಐಶ್ವರ್ಯ ದೇವತೆಗೆ ಜೇಡಿಮಣ್ಣು ಬಹಳ ಪ್ರಿಯ. ಆದ್ದರಿಂದ ಮನೆಯಲ್ಲಿ ದೇವರಿಗೆ ದೀಪಾರಾಧನೆ ಮಾಡುವಾಗ ಜೇಡಿಮಣ್ಣಿನಿಂದ ಮಾಡಿದ ದೀಪದಿಂದ ಆರಾಧನೆ ಮಾಡಬೇಕು. ಹಾಗೇ ಹೊಸದಾಗಿ ತಯಾರಿಸಿದ ಹಣತೆಯಿಂದಲ್ಲೇ ದೀಪಾರಾಧನೆ ಮಾಡಬೇಕು. ಈಗಾಗಲೇ ಬಳಸಿದ ದೀಪದಿಂದ ಆರಾಧನೆ ಮಾಡಬಾರದು. ಈ ನಿಯಮ ಪಾಲಿಸಿ ದೀಪಾರಾಧನೆ ಮಾಡಿದರೆ ನಿಮಗೆ ಐಶ್ವರ್ಯ ದೇವತೆ ಅನುಗ್ರಹ ಲಭಿಸುತ್ತದೆ.