ಆಷಾಢ ಶುಕ್ರವಾರ ಲಕ್ಷ್ಮೀ ದೇವಿಗೆ ಹೀಗೆ ಪೂಜೆ ಮಾಡಿದರೆ ಒಳಿತು

Krishnaveni K
ಶುಕ್ರವಾರ, 26 ಜುಲೈ 2024 (08:52 IST)
ಬೆಂಗಳೂರು: ಆಷಾಢ ಶುಕ್ರವಾರದಂದು ಲಕ್ಷ್ಮೀ ದೇವಿ ಪೂಜೆ ಮಾಡುವುದು ವಿಶೇಷವಾಗಿರುತ್ತದೆ. ಲಕ್ಷ್ಮೀ ದೇವಿಯ ಪೂಜೆಯಿಂದ ಇಂದು ಎಲ್ಲಾ ರೀತಿಯಲ್ಲೂ ನಮಗೆ ಸಮೃದ್ಧಿಯುಂಟಾಗುತ್ತದೆ.

ಆಷಾಢ ಮಾಸದಲ್ಲಿ ಪ್ರತೀ ಶುಕ್ರವಾರವೂ ವಿಶೇಷವೇ. ಪ್ರತೀ ಶುಕ್ರವಾರವೂ ಲಕ್ಷ್ಮೀ ದೇವಿಗೆ ಪೂಜೆ ಮಾಡುವುದು ನಮ್ಮ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ. ಇಂದು ಬೆಳಿಗ್ಗೆ ಎದ್ದು ಮಡಿಯಲ್ಲಿ ಮನೆ ಶುಚಿಯಾಗಿರಿಸಿ ವಿಶೇಷವಾಗಿ ತುಳಸಿ ಕಟ್ಟೆಯ ಮುಂಭಾಗ ರಂಗೋಲಿ ಹಾಕಿ ಪೂಜೆ ಮಾಡಿ.

ಇಂದು ಲಕ್ಷ್ಮೀ ದೇವಿಯ ಪೂಜೆ ನಿಮಿತ್ತ ಮುಸ್ಸಂಜೆ ಹೊತ್ತು ದೀಪ ಹಚ್ಚಿಟ್ಟು ಅಂಧಕಾರವನ್ನು ನಿವಾರಿಸುವುದೇ ಪೂಜೆಯ ವಿಶೇಷತೆ. ಲಕ್ಷ್ಮೀ ದೇವಿ ಮನೆಗೆ ಬರಬೇಕೆಂದರೆ ಅಂಧಕಾರವನ್ನು ಹೋಗಲಾಡಿಸಬೇಕು. ಜೊತೆಗೆ ದೀಪವನ್ನು ದಾನ ಮಾಡುವುದರಿಂದ ಮನಸ್ಸಿನ ದುಃಖ ದುಮ್ಮಾನಗಳು ದೂರವಾಗಿ ನೆಮ್ಮದಿ ಮೂಡುವುದು.

ಲಕ್ಷ್ಮೀ ದೇವಿ ಪೂಜೆ ಎಂದರೆ ಕೇವಲ ಹೆಂಗಳೆಯರು ಮಾತ್ರ ಮಾಡಬೇಕೆಂದೇನಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು, ಮಹಿಳೆಯರಿಗೆ ಮನೆಯಲ್ಲಿ ಸುಖ ಸಮೃದ್ಧಿ, ನೆಮ್ಮದಿ, ಪುರುಷರಿಗೆ ಐಶ್ವರ್ಯಾಭಿವೃದ್ಧಿ, ಮಾನಸಿಕವಾಗಿ ನೆಮ್ಮದಿಗಾಗಿ ಹಂಬಲಿಸುವವರಿಗೆ ನೆಮ್ಮದಿ ನೀಡುವ ಲಕ್ಷ್ಮೀ ದೇವಿ ಒಲಿಯಬೇಕೆಂದರೆ ಇಂದು ಭಕ್ತಿಯಿಂದ ಲಕ್ಷ್ಮೀ ದೇವಿ ಪೂಜೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments