Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Krishnaveni K
ಸೋಮವಾರ, 19 ಮೇ 2025 (08:23 IST)
ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಈ  ವಾರ ರಾಜ್ಯದಲ್ಲಿ ಹವಾಮಾನ ಮತ್ತು ಮಳೆ ಸಂಭವ ಹೇಗಿರಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಕಳೆದ ಕೆಲವು ದಿನಗಳಿಂದಲೂ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಮಳೆಯಾಗುತ್ತಿದೆ. ಮುಂಗಾರು ಈ ಬಾರಿ ಬೇಗನೇ ಪ್ರವೇಶ ಮಾಡಲಿದ್ದು, ಅದಕ್ಕಿಂತ ಮೊದಲೇ ಬೇಸಿಗೆಯ ಮಳೆ ಅಬ್ಬರ ಜೋರಾಗಿ ಮುಂದುವರಿದಿದೆ.

ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು ಈ ವಾರವೂ ಮಳೆಯ ವಾತಾವರಣ ಮುಂದುವರಿಯಲಿದೆ. ಈ ವಾರ ಪೂರ್ತಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಸತತವಾಗಿ ಮಳೆಯಾಗುತ್ತಿರುವುದರಿಂದ ತಾಪಮಾನ ಕೊಂಚ ಕಡಿಮೆಯಾಗಿದ್ದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ ಈ ವಾರ 26-28 ಡಿಗ್ರಿಯವರೆಗೆ ತಲುಪಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ಹಾವೇರಿ, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ವಾರ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ಮುಂದಿನ ಸುದ್ದಿ
Show comments