ಬೆಂಗಳೂರು: ಜನಪ್ರತಿನಿಧಿಗಳು ಎಂದರೆ ಬೇಕಾದಷ್ಟು ದುಡ್ಡು ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಕರ್ನಾಟಕದ ಶಾಸಕರಿಗೆ ಮಾಸಿಕವಾಗಿ ಸಿಗುವ ವೇತನವೆಷ್ಟು ಗೊತ್ತಾ? ಇಲ್ಲಿದೆ ಡೀಟೈಲ್ಸ್.
ಕರ್ನಾಟಕದಲ್ಲಿ ಶಾಸಕರಿಗೆ ಹಲವು ಸರ್ಕಾರೀ ಸೌಲಭ್ಯಗಳು ಲಭ್ಯವಾಗುತ್ತದೆ. ಶಾಸಕರಿಗೆ ವಿಧಾನಸಭೆ ಕಲಾಪಕ್ಕೆ ಹಾಜರಾದರೆ, ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ ನೀಡಿದರೆ, ದೂರವಾಣಿ ಖರ್ಚು ವೆಚ್ಚಗಳು ಸೇರಿದಂತೆ ಎಲ್ಲದಕ್ಕೂ ಸರ್ಕಾರೀ ನೌಕರರಂತೆ ಭತ್ಯೆ ನೀಡಲಾಗುತ್ತದೆ.
ಪ್ರಸಕ್ತಿ ಕರ್ನಾಟಕದಲ್ಲಿ ಶಾಸಕರಾದವರಿಗೆ ಮಾಸಿಕ ವೇತನ 40,000 ರೂ.ಗಳಷ್ಟಿದೆ. ಇಷ್ಟೆಯಾ ಅಂತ ಹುಬ್ಬೇರಿಸಬೇಡಿ. ಇದು ವೇತನ ಮಾತ್ರ. ಇದರ ಹೊರತಾಗಿ ತಮ್ಮ ಕ್ಷೇತ್ರ ಪ್ರಯಾಣ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು 60,000 ರೂ., ಸಭೆಗೆ ಹಾಜರಾದರೆ 7 ಸಾವಿರ ರೂ. ಭತ್ಯೆ, ದೂರವಾಣಿ, ಮೊಬೈಲ್ ಖರ್ಚಿಗಾಗಿ 20 ಸಾವಿರ ರೂ. ಭತ್ಯೆ ಸಿಗುತ್ತದೆ. ಅಲ್ಲದೆ ವಾರ್ಷಿಕ ಪ್ರಮಾಣ ಭತ್ಯೆ 2.50 ಲಕ್ಷ ರೂ. ಸಿಗುತ್ತದೆ.
2022 ರಲ್ಲಿ ಕೊನೆಯದಾಗಿ ಶಾಸಕರ ವೇತನ ಶೇ.60 ರಷ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೊಮ್ಮೆ ಶಾಸಕರ ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿದೆ. ಇದಕ್ಕೆ ಬಹುತೇಕ ಸಚಿವರು, ಶಾಸಕರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಶಾಸಕರ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ.