Select Your Language

Notifications

webdunia
webdunia
webdunia
webdunia

ಅರಶಿನದಿಂದ ಈ ಕೆಲಸ ಮಾಡಿದರೆ ನಿಮಗೆ ಅದೃಷ್ಟ ಒಲಿದು ಬರುತ್ತದೆ

ಅರಶಿನದಿಂದ ಈ ಕೆಲಸ ಮಾಡಿದರೆ ನಿಮಗೆ ಅದೃಷ್ಟ ಒಲಿದು ಬರುತ್ತದೆ
ಬೆಂಗಳೂರು , ಶನಿವಾರ, 17 ಏಪ್ರಿಲ್ 2021 (06:54 IST)
ಬೆಂಗಳೂರು : ಅರಶಿನ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅರಶಿನವನ್ನು ಬಳಸುವುದರ ಮೂಲಕ  ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆಯಂತೆ. ಹಾಗಾದ್ರೆ ನಿಮ್ಮ ಏಳಿಗೆಗಾಗಿ ಅರಶಿನವನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ.

ಅರಶಿನ ಹಳದಿ ಬಣ್ಣದಲ್ಲಿರುತ್ತದೆ. ಇದು ಗುರು ಗ್ತಹದೊಂದಿಗೆ ಸಂಬಂಧವನ್ನು ಹೊಂದಿದೆ. ಹಾಗಾಗಿ ಗುರುಗ್ರಹವನ್ನು ಬಲಪಡಿಸಲು ಹಳದಿ ದಾರದಲ್ಲಿ ಅರಶಿನ ಕೊಂಬನ್ನು ಕಟ್ಟಿ ತೋಳು ಮತ್ತು ಕುತ್ತಿಗೆಗೆ ಧರಿಸಿ. ಇದರಿಂದ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಶಿನವನ್ನುಮಿಕ್ಸ್ ಮಾಡಿ ಸ್ನಾನ ಮಾಡಿ. ಇದರಿಂದ ಜೀವನದಲ್ಲಿ ಎದುರಾಗುವ ಸಂಕಷ್ಟ ನಿವಾರಣೆಯಾಗುತ್ತದೆ.

ಮನೆಯ ಹೊಸ್ತಿಲಿಗೆ ಅರಶಿನವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸವುದಿಲ್ಲ. ಮದುವೆಯಲ್ಲಿ ಅಡೆತಡೆಯಾಗುತ್ತಿದ್ದರೆ ಅರಶಿನವನ್ನು ನೀರಿಗೆ ಬೆರೆಸಿ ಸೂರ್ಯನಿಗೆ ಅರ್ಪಿಸಿ. ಮನೆಯಲ್ಲಿ ಅರಶಿನ ನೀರನ್ನು ಪ್ರೋಕ್ಷಣೆ ಮಾಡಿದರೆ  ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ