Select Your Language

Notifications

webdunia
webdunia
webdunia
webdunia

ಕಠಿಣ ನಿಯಮಗಳ ಬಗ್ಗೆ ಸರ್ಕಾರದಿಂದ ನಿರ್ಧಾರ -ಸಿಎಂ

ಕಠಿಣ ನಿಯಮಗಳ ಬಗ್ಗೆ ಸರ್ಕಾರದಿಂದ ನಿರ್ಧಾರ -ಸಿಎಂ
ಬೆಂಗಳೂರು , ಶುಕ್ರವಾರ, 16 ಏಪ್ರಿಲ್ 2021 (11:41 IST)
ಬೆಂಗಳೂರು : ಕೊವಿಡ್ ಮಹಾಮಾರಿ ಬೆಂಗಳೂರಿನಲ್ಲಿ ಮಿತಿ ಮೀರುತ್ತಿದೆ. ಹಾಗಾಗಿ ಕಠಿಣ ನಿಯಮಗಳ ಬಗ್ಗೆ ಮಂಗಳವಾರ ಸರ್ಕಾರದಿಂದ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ವಾರದ ಬಳಿಕ ಕುಳಿತು ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. 8 ನಗರಗಳಲ್ಲಿ ಕೊರೊನಾ ಕರ್ಪ್ಯೂ ಮುಂದುವರಿಕೆಯಾಗಲಿದೆ. ಏಪ್ರಿಲ್ 20ರವರೆಗೆ ನೈಟ್ ಕರ್ಪ್ಯೂ ಮುಂದುವರಿಕೆಯಾಗಲಿದೆ. ತಜ್ಞರು, ವಿಪಕ್ಷ ನಾಯಕರೊಂದಿಗೆ ಚರ್ಚಿಸಿ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗುವುದು. ಪ್ರಧಾನಿ ಮೋದಿಯವರ ಸಲಹೆಯನ್ನು ಪಡೆದು ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೇರೆ ರಾಜ್ಯಗಳ್ಲಲಿ ಲಾಕ್ ಡೌನ್ ಮಾಡಲಾಗಿದ್ದು , ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯವನ್ನು ಹೋಲಿಸಬೇಡಿ. ನಮ್ಮ ರಾಜ್ಯಕ್ಕೂ ಬೇರೆ ರಾಜ್ಯಕ್ಕೂ ಪರಿಸ್ಥಿತಿ ಬೇರೆ ಇದೆ. ಏಪ್ರಿಲ್ 20ರ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

9 ದಿನ ಪೂರೈಸಿದ ಬಸ್ ಮುಷ್ಕರ: ಹೆಚ್ಚಿದ ಬಸ್ ಸಂಚಾರ