Select Your Language

Notifications

webdunia
webdunia
webdunia
webdunia

ಇವು ನಿಮ್ಮ ಕಣ್ಣಿಗೆ ಕಾಣಿಸಿದರೆ ಶೀಘ್ರದಲ್ಲಿಯೇ ಅದೃಷ್ಟ ನಿಮಗೆ ಒಲಿದು ಬರುತ್ತದೆ ಎಂದರ್ಥವಂತೆ

ಇವು ನಿಮ್ಮ ಕಣ್ಣಿಗೆ ಕಾಣಿಸಿದರೆ ಶೀಘ್ರದಲ್ಲಿಯೇ ಅದೃಷ್ಟ ನಿಮಗೆ ಒಲಿದು ಬರುತ್ತದೆ ಎಂದರ್ಥವಂತೆ
ಬೆಂಗಳೂರು , ಬುಧವಾರ, 3 ಜುಲೈ 2019 (08:51 IST)
ಬೆಂಗಳೂರು : ವ್ಯಕ್ತಿಗೆ ಜೀವನದಲ್ಲಿ ಒಮ್ಮೆ ಅದೃಷ್ಟ ಒಲಿದರೆ ಆತ ಮುಟ್ಟಿದೆಲ್ಲಾ ಚಿನ್ನವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಈ ಅದೃಷ್ಟ ಎಲ್ಲರಿಗೂ ಒಲಿದುಬರಲ್ಲ. ಒಂದು ವೇಳೆ ನಿಮಗೆ ಅದೃಷ್ಟ ಒಲಿದು ಬರುತ್ತದೆ ಎಂದರೆ ಕೆಲವು ಸೂಚನೆಗಳು ಕಾಣಿಸಿಕೊಳ್ಳುತ್ತದೆ. ಅದು ಯಾವುದೆಂಬುದು ಇಲ್ಲಿದೆ ನೋಡಿ.




* ಬೆಳಗ್ಗೆ ಎದ್ದ ತಕ್ಷಣ ತೆಂಗಿನ ಕಾಯಿ ಅಥವಾ ಬಿಳಿ ಜಲ ಪಕ್ಷಿ ಕಾಣಿಸಿಕೊಂಡರೆ ಯಾವುದೋ ಒಂದು ಮಾರ್ಗದಿಂದ ಹಣ ಬರುತ್ತದೆ ಎಂಬುದರ ಸಂಕೇತವಾಗಿದೆ.


* ಬಿಳಿ ಅಥವಾ ಬಂಗಾರದ ಬಣ್ಣದ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಶೀಘ್ರದಲ್ಲೇ ನೀವು ಶ್ರೀಮಂತರಾಗುತ್ತೀರ ಹಣ ನಿಮ್ಮ ಬಳಿ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.


* ಪ್ರಯಾಣಿಸುವಾಗ ಕೋತಿ, ನಾಯಿ ಹಾಗೂ ಪಕ್ಷಿ ಯಾವುದಾದರೂ ನಿಮ್ಮ ವಾಹನಕ್ಕೆ ಬಲಭಾಗದಲ್ಲಿ ಅಡ್ಡ ಬಂದರೆ ಅದು ನೀವು ಶೀಘ್ರದಲ್ಲಿಯೇ ಧನವಂತರಾಗುತ್ತೀರ ಎಂಬ ಸಂಕೇತವಾಗಿದೆ .


* ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊದಲು ನೋಡುವ ಮೊದಲ ವಸ್ತು ಹಾಲು ಅಥವಾ ಮೊಸರು ಅಥವಾ ಹಾಲಿನ ಉತ್ಪನ್ನಗಳಲ್ಲಿ ಯಾವುದಾದರೂ ಒಂದು ಆಗಿದ್ದರೆ ಹಣ ನಿಮ್ಮ ಹತ್ತಿರದಲ್ಲೇ ಇದೆ ಎಂದು ಸೂಚಿಸುತ್ತದೆ.


 * ನೀವು ಹೊರಗೆ ಹೋಗುವಾಗ ಮದುವೆಯಾದ ಮಹಿಳೆ ಸಿಂಧೂರದೊಂದಿಗೆ ಕಾಣಿಸಿಕೊಂಡರೆ, ಶೀಘ್ರದಲ್ಲೇ ಒಂದು ದೊಡ್ಡ ಮೊತ್ತದಲ್ಲಿ ಹಣ ಬರುತ್ತದೆ ಎಂಬ ಸೂಚನೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಯ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?