Select Your Language

Notifications

webdunia
webdunia
webdunia
webdunia

ಈ ಪ್ರಾಣಿ ಪಕ್ಷಿಗಳು ಮನೆ ಪ್ರವೇಶಿಸಿದರೆ ಅಪಶಕುನವಂತೆ

ಈ ಪ್ರಾಣಿ ಪಕ್ಷಿಗಳು ಮನೆ ಪ್ರವೇಶಿಸಿದರೆ ಅಪಶಕುನವಂತೆ
ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2019 (05:59 IST)
ಬೆಂಗಳೂರು : ಕೆಲವರು ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಪ್ರತಿಯೊಬ್ಬ ಜೀವಿಯಲ್ಲೂ ದೇವರಿರುತ್ತಾನೆ ಎನ್ನುತ್ತಾರೆ. ಆದರೆ ಎಲ್ಲಾ ಪ್ರಾಣಿ ಪಕ್ಷಿಗಳು ಮನೆಗೆ ಶುಭವಲ್ಲ. ಅವು ಮನೆಗೆ ಅಪಶಕುನ ಎನ್ನಲಾಗಿದೆ. ಅಂತಹ ಜೀವಿಗಳು ಮನೆ ಪ್ರವೇಶಿಸಿದರೆ ಆ ಮನೆಯಲ್ಲಿ ಕೆಟ್ಟದೇ ನಡೆಯುತ್ತದೆ ಎನ್ನಲಾಗಿದೆ.


 


*ಪಾರಿವಾಳಗಳು ಋಣಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಪಾರಿವಾಳಗಳು ಮನೆಯ ಒಳಗೆ ಗೂಡು ಕಟ್ಟಿದರೆ ವಿವಿಧ ಸಮಸ್ಯೆಗಳು ಎದುರಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

*ಮನೆಯೊಳಗೆ ಜೇನುನೋಣಗಳು ಗೂಡುಗಳು ಕಂಡು ಬಂದರೆ ಮೊದಲು ಅದನ್ನು ತೆಗೆದು ಹಾಕುವುದು ಉತ್ತಮ. ಅವು ಕೆಟ್ಟ ಶಕುನವನ್ನು ತರುತ್ತವೆ. ಮನೆಯ ಮಂದಿಗೆ ಅಪಘಾತಗಳನ್ನು ತರುವ ಸಂದೇಶವನ್ನು ಆಹ್ವಾನಿಸುತ್ತದೆ ಎನ್ನಲಾಗುವುದು.

* ಬಾವಲಿಯು ಸಾಮಾನ್ಯವಾಗಿ ಸಾವು ಹಾಗೂ ನಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು. ಬಾವಲಿಗಳು ಮನೆಯ ಒಳಗೆ ಪ್ರವೇಶ ಪಡೆಯುವುದು ಒಂದು ಕೆಟ್ಟ ಅಪಶಕುನ ಎಂದು ಹೇಳಲಾಗುವುದು.

* ಗೂಬೆ ಮನೆಯ ಒಳಗೆ ಅಥವಾ ಇನ್ನಿತರ ಸ್ಥಳದಲ್ಲಿ ಕಾಣಿಸಿಕೊಳ್ಳುವುದು ಸಹ ದುರ್ಬಲ ಶಕುನ ಎಂದು ಪರಿಗಣಿಸಲಾಗುವುದು.

* ಕಪ್ಪು ಬೆಕ್ಕು ಅಪಶಕುನ ಎಂದು ಪರಿಗಣಿಸಲಾಗುವುದು. ಕಪ್ಪು ಬಣ್ಣದ ಬೆಕ್ಕು ಮನೆಯ ಒಳಗೆ ಪ್ರವೇಶಿಸಿದರೆ ಅದರಿಂದ ಮನೆಗೆ ಕೆಟ್ಟದಾಗುತ್ತದೆ ಎನ್ನುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಒಂದು ರಾಶಿಯವರು ಕೆಂಪು ದಾರ ಕಟ್ಟಿಕೊಂಡರೆ ಆರ್ಥಿಕ ವೃದ್ಧಿಯಾಗುತ್ತದೆಯಂತೆ