Publish Date: Tue, 13 Feb 2018 (06:15 IST)
Updated Date: Tue, 13 Feb 2018 (06:19 IST)
ಬೆಂಗಳೂರು : ಎಲ್ಲ ಕಷ್ಟ ಹಾಗೂ ಕ್ಲೇಶಗಳನ್ನು ದೂರ ಮಾಡಲು ಹನುಮಂತನ ಆರಾಧನೆ ಸರ್ವಶ್ರೇಷ್ಠ. ಕಲಿಯುಗದಲ್ಲಿ ಪವನಪುತ್ರ ಹನುಮಂತ ಅತಿ ಬೇಗ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆಂದು ನಂಬಲಾಗಿದೆ.
ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಹನುಮಂತನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.. ಪ್ರತಿದಿನ ಹನುಮಾನ್ ಚಾಲೀಸ್ ಓದುವ ವ್ಯಕ್ತಿಗೆ ಯಾವುದೇ ಕಷ್ಟ, ದುಃಖ ಬರುವುದಿಲ್ಲವೆಂದು ನಂಬಲಾಗಿದೆ.
ಹನುಮಂತನ ಭಕ್ತರು ಹನುಮಾನ್ ಚಾಲೀಸ್ನ 11 ಪುಸ್ತಕವನ್ನು ಮಂಗಳವಾರ ಭಕ್ತರಿಗೆ ಹಂಚುವ ಮೂಲಕವೂ ಹನುಮಂತನ ಕೃಪೆಗೆ ಪಾತ್ರರಾಗಬಹುದು. ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೆ ಉಳಿದ ಭಕ್ತರಿಗೂ ಪುಣ್ಯ ಮಾಡಲು ಅವಕಾಶ ನೀಡಿದಂತಾಗುತ್ತದೆ. ನಾವು ನೀಡಿದ ಪುಸ್ತಕವನ್ನು ಎಷ್ಟು ಭಕ್ತರು ಓದುತ್ತಾರೋ ಅಷ್ಟು ಪಟ್ಟು ಪುಣ್ಯ, ಧನ, ಸಂತೋಷ ನಮಗೆ ಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ